ಸಾರಾಂಶ
-ದೇವರಾಜ ಅರಸ್ ಜಯಂತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಿಸಿಎಂ ಸಿಬ್ಬಂದಿಗೆ ಸನ್ಮಾನ
----ಕನ್ನಡಪ್ರಭ ವಾರ್ತೆ ಸುರಪುರ
ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದವರ ಹರಿಕಾರ ಮತ್ತು ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಿಸಲು ಕಾರಣೀಭೂತರಾದವರು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸ್ ಜಯಂತಿಯಲ್ಲಿ ಮಾತನಾಡಿ, ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಅಭಿವೃದ್ಧಿಪಡಿಸಿದ್ದಾರೆ. ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದರು. ಎಲ್ ಜಿ ಹಾವನೂರ ನೇತೃತ್ವದುದ್ದಕ್ಕೂ ಹಿಂದುಳಿದ ವರ್ಗದ ಅಯೋಗ ಸ್ಥಾಪಿಸಿದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದರು.
ನೂತನವಾಗಿ ಆಯ್ಕೆಯಾದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರನ್ನು ಬಿಸಿಎಂ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿದರು. ಹಿಂದುಳಿದ ವರ್ಗದ ವಸತಿ ನಿಲಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಗೌರವಿಸಲಾಯಿತು. ಪ್ರಬಂಧ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು.ಬಿಸಿಎಂ ಸಹಾಯಕ ನಿರ್ದೇಶಕ ತಿಪ್ಪಾರೆಡ್ಡಿ ಪಾಟೀಲ್, ಉಪ ಖಜಾನಾಧಿಕಾರಿ ಸಣ್ಣೆಕ್ಕಪ್ಪ ಕೊಂಡಿಕಾರ ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಮಲ್ಲು ದಂಡು ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಪರಿಶಿಷ್ಟ ವರ್ಗಗಗಳ ಅಧಿಕಾರಿ ಎಂ.ಡಿ. ಸಲೀಂ, ನಿಲಯ ಪಾಲಕರಾದ ಶಾಂತಬಾಯಿ, ಯಂಕಪ್ಪ ಟಣಕೆದಾರ, ಮಲ್ಲಿಕಾರ್ಜುನ, ನಾಗಪ್ಪ, ಬಸವರಾಜ, ವಿರೇಶ, ವೆಂಕಟೇಶ, ನೀಲಮ್ಮ, ರೂಪಾವತಿ, ಮಹಾದೇವಿ, ಅನಾರಕಲಿ, ಶೀಲಾ ಇದ್ದರು. ರಮೇಶ ನಿರೂಪಿಸಿದರು. ಆನಂದ ವಂದಿಸಿದರು.
-------ಫೋಟೊ: 20ವೈಡಿಆರ್17: ಸುರಪುರ ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸ್ ಜಯಂತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಸಿಎಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.