ಸಾರಾಂಶ
ಮಾಗಡಿ: ನೀರು ಪ್ರತಿಯೊಬ್ಬರೂ ಪ್ರತಿನಿತ್ಯ ಬಳಸುತ್ತೇವೆ. ನಾವು ಕುಡಿಯುವ ನೀರು ಶುದ್ಧವಾಗಿ ಇದ್ದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜೆ.ಪಿ.ನಗರ ರೋಟರಿ ಅಧ್ಯಕ್ಷರು ಟಿ.ಎಸ್.ಶ್ರೀನಿವಾಸ್ ರಾವ್ ಹೇಳಿದರು.
ಮಾಗಡಿ: ನೀರು ಪ್ರತಿಯೊಬ್ಬರೂ ಪ್ರತಿನಿತ್ಯ ಬಳಸುತ್ತೇವೆ. ನಾವು ಕುಡಿಯುವ ನೀರು ಶುದ್ಧವಾಗಿ ಇದ್ದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜೆ.ಪಿ.ನಗರ ರೋಟರಿ ಅಧ್ಯಕ್ಷರು ಟಿ.ಎಸ್.ಶ್ರೀನಿವಾಸ್ ರಾವ್ ಹೇಳಿದರು.
ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಬೆಂಗಳೂರಿನ ಜೆ.ಪಿ.ನಗರ ರೋಟರಿ, ಮಾಗಡಿ ರೋಟರಿ ಸೆಂಟ್ರಲ್ ವತಿಯಿಂದ ಕುಡಿಯುವ ನೀರಿನ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಕಲುಷಿತ ನೀರಿನಿಂದ ಸಾಕಷ್ಟು ಕಾಯಿಲೆಗಳು ಬರುತ್ತದೆ. ಮಲೇರಿಯಾ, ಕಾಲರಾ ಸೇರಿದಂತೆ ಅನೇಕ ಕಾಯಿಲೆಗಳು ನೇರವಾಗಿ ನೀರಿನಿಂದ ಬರುವುದರಿಂದ ವಿದ್ಯಾರ್ಥಿಗಳು ಶುದ್ಧ ನೀರು ಕುಡಿಯುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಹಿನ್ನಲೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಶುದ್ಧ ನೀರು ಘಟಕಗಳನ್ನು ಅಳವಡಿಸಲಾಗುತ್ತಿದೆ ಎಂದರು.ರೋಟರಿ ಮಾಗಡಿ ಸೆಂಟ್ರನ್ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಗ್ರಾಮೀಣ ಭಾಗ ಸರ್ಕಾರಿ ಶಾಲೆಗಳಲ್ಲಿ ಶುದ್ಧ ನೀರಿನ ಘಟಕಗಳು ಇಲ್ಲದ ಕಾರಣ ಕೊಳವೆ ಬಾವಿ ನೀರನ್ನೇ ನೇರವಾಗಿ ಮಕ್ಕಳು ಬಳಸುತ್ತಿದ್ದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಆದ್ದರಿಂದ ರೋಟರಿ ಸಂಸ್ಥೆಯಿಂದ ಗುಣಮಟ್ಟದ ಶುದ್ಧ ನೀರಿನ ಯಂತ್ರಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಹಕಾರ ನೀಡಿದ ಬೆಂಗಳೂರು ರೋಟರಿಗೆ ಆಭಾರಿಯಾಗಿರುತ್ತೇವೆ ಎಂದರು.
ವಿವಿಧ ಶಾಲೆಗಳಲ್ಲಿ ಶುದ್ಧ ನೀರು ಘಟಕ ವಿತರಣೆ: ಎಚ್‌ಪಿಎಸ್ ಮೋಟಗಾನಹಳ್ಳಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುದೂರು, ಆರ್‌ಆರ್‌ಎಚ್‌ಎಸ್ ಹೊಸಪಾಳ್ಯ, ಜಿಕೆಬಿಎಂಎಸ್ ಮಾಗಡಿ, ಜಿಎಚ್‌ಪಿಎಸ್ ತಿರುಮಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು. ಜಿಎಚ್‌ಪಿಎಸ್ ಅಜ್ಜನಹಳ್ಳಿ ಶಾಲೆಗಳಲ್ಲಿ ಅಳವಡಿಸಲಾಯಿತು.ಇದೇ ವೇಳೆ ರೋಟರಿ ಸಹಾಯ ಜಿಲ್ಲಾ ಪಾಲಕರು ಅಮರ್ ಚೇತನ್, ಮಾಗಡಿ ರೋಟರಿ ಕಾರ್ಯದರ್ಶಿ ಶಂಕರ ಮೂರ್ತಿ,
ಸುಧೀಂದ್ರ, ಮೋಹನ್, ಕುಮಾರ್, ಜಯಶಂಕರ್, ಗಣೇಶ, ವಿನೋದ್, ಅಶ್ವಥ್, ಮೂರ್ತಿ, ದಕ್ಷಿಣಮೂರ್ತಿ ಇತರರು ಭಾಗವಹಿಸಿದ್ದರು.