ಮಾನವ ಸಂಪನ್ಮೂಲ ಧನಾತ್ಮಕವಾಗಿ ಪರಿವರ್ತಿಸಿದರೆ ಅಭಿವೃದ್ಧಿ: ಪ್ರಾಚಾರ್ಯ ಶ್ರೀನಿವಾಸ ಪ್ರಭು

| Published : Jul 14 2024, 01:34 AM IST

ಮಾನವ ಸಂಪನ್ಮೂಲ ಧನಾತ್ಮಕವಾಗಿ ಪರಿವರ್ತಿಸಿದರೆ ಅಭಿವೃದ್ಧಿ: ಪ್ರಾಚಾರ್ಯ ಶ್ರೀನಿವಾಸ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಸಂಪನ್ಮೂಲ ಧನಾತ್ಮಕವಾಗಿ ಪರಿವರ್ತಿಸಿದರೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರಾಚಾರ್ಯ ಶ್ರೀನಿವಾಸ ಪ್ರಭು ಹೇಳಿದರು.

ಕನ್ನಡಪ್ರಭ ವಾರ್ತೆ ಹಳಿಯಾಳ

ಜನಸಂಖ್ಯೆಯು ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಜನಸಂಖ್ಯಾ ಸ್ಫೋಟ ಯಾವುದೇ ಕಾರಣಕ್ಕೂ ಅಪೇಕ್ಷಣಿಯವಲ್ಲ, ಆರೋಗ್ಯದಾಯಕವಲ್ಲ, ಪ್ರಗತಿಗೂ ಪ್ರೇರಕವಲ್ಲ. ಆದರೆ ಮಾನವ ಸಂಪನ್ಮೂಲ ಧನಾತ್ಮಕವಾಗಿ ಪರಿವರ್ತಿಸಿದರೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಪ್ರಾಚಾರ್ಯ ಶ್ರೀನಿವಾಸ ಪ್ರಭು ಹೇಳಿದರು.

ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ಬಿಸಿಎ ಮತ್ತು ಬಿಕಾಂ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ 2024ರ ಅಂಗವಾಗಿ ಆಯೋಜಿಸಿದ್ದ ಜನಸಂಖ್ಯಾ ಸ್ಫೋಟದಿಂದ ಉಂಟಾಗುವ ನಿರುದ್ಯೋಗ ಮತ್ತು ಹಣದುಬ್ಬರ ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಜನಸಂಖ್ಯೆ ಬೆಳೆಯುತ್ತಿದ್ದರೂ ಜನರು ವಾಸಿಸುವ ಭೂಪ್ರದೇಶ ಮೊದಲಿನಷ್ಟೇ ಇದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ವಾಸಿಸಲು ನೆಲ, ಬದುಕಲು ಜಲ, ಆಹಾರ ಉದ್ಯೋಗ ಮರೀಚಿಕೆಯಾಗುತ್ತಿದೆ ಎಂದರು.

ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅತೀ ಹೆಚ್ಚು ಜನಭರಿತ ದೇಶ. ದೇಶದಲ್ಲಿನ ಮಾನವ ಸಂಪನ್ನೂಲವನ್ನು ಸದ್ಬಳಕೆ ಮಾಡಿ, ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಮೂಲಕ ಪ್ರಕೃತಿಯ ಪೋಷಣೆ, ರಕ್ಷಣೆ ಮತ್ತು ಕಾಳಜಿಯಿಂದ ಜನಸಂಖ್ಯಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ಉನ್ನತಿ ರವೀಂದ್ರ ಪ್ರಥಮ ಸ್ಥಾನ ಹಾಗೂ ಸಂಜನಾ ಹೊನ್ನಪನವರ ದ್ವಿತೀಯ ಸ್ಥಾನವನ್ನು ಪಡೆದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಸಂಗೀತಾ ಪ್ರಭು, ಮಿನಾಜ್ ಶೇಕ್, ಸ್ವಾತಿ ಮೊರೆ ಇದ್ದರು.