ಶಾಸಕರ ಪರಿಶ್ರಮದ ಫಲವೇ ಅಭಿವೃದ್ಧಿ

| Published : Mar 07 2024, 01:48 AM IST

ಸಾರಾಂಶ

ರಾಮನಗರ: ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಪರಿಶ್ರಮದ ಫಲವಾಗಿ ಅಭಿವೃದ್ಧಿ ಕಾರ್ಯಗಳು ಸಾಕಾರವಾಗುತ್ತಿವೆ ಎಂದು ಬಿಡದಿ ಆರ್‌ಎಸ್ಸೆಸ್ಸೆನ್‌ ಎನ್ ಸೊಸೈಟಿ ಅಧ್ಯಕ್ಷ ವಾಜರಹಳ್ಳಿ ಮಹೇಶ್ ಹೇಳಿದರು.

ರಾಮನಗರ: ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಪರಿಶ್ರಮದ ಫಲವಾಗಿ ಅಭಿವೃದ್ಧಿ ಕಾರ್ಯಗಳು ಸಾಕಾರವಾಗುತ್ತಿವೆ ಎಂದು ಬಿಡದಿ ಆರ್‌ಎಸ್ಸೆಸ್ಸೆನ್‌ ಎನ್ ಸೊಸೈಟಿ ಅಧ್ಯಕ್ಷ ವಾಜರಹಳ್ಳಿ ಮಹೇಶ್ ಹೇಳಿದರು.

ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜರಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಸಿ ಮಾತನಾಡಿದ ಅವರು, ಗ್ರಾಮದ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಶಾಸಕರು ಎಚ್.ಸಿ.ಬಾಲಕೃಷ್ಣ ಅವರು 35 ಲಕ್ಷ ರು. ಅನುದಾನ ನೀಡಿದ್ದು, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕೆಲಸಗಳು ಸಾಕಾರವಾಗುತ್ತಿವೆ ಎಂದು ತಿಳಿಸಿದರು.

ಒಬ್ಬ ಚುನಾಯಿತ ಪ್ರತಿನಿಧಿಗೆ ಅಭಿವೃದ್ಧಿ ಕೆಲಸ ಮಾಡುವ ಬದ್ದತೆ ಇದ್ದರೆ ವಿವಿಧ ಇಲಾಖೆಗಳಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ಶಾಸಕ ಬಾಲಕೃಷ್ಣ ಉದಾಹರಣೆ. ಕಳೆದ 8 ತಿಂಗಳ ಅವಧಿಯಲ್ಲಿ ಬಿಡದಿ ಭಾಗದಲ್ಲಿ ಶಾಶ್ವತ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಪ್ರಮುಖವಾಗಿ ಬೈರಾಗಿ ಕಾಲೋನಿಯಲ್ಲಿರುವ ಸಮಸ್ಯೆ ಬಗೆಹರಿಸಿ ವಾಸದ ಮನೆಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ವಾಜರಹಳ್ಳಿ ಕಾಲೋನಿಗೆ ಅರಣ್ಯ ಪ್ರದೇಶದ ಜಾಗದಿಂದ ಬದಲಿ ಜಾಗದ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಸಾಗುತ್ತಿದ್ದು, ಬಾಲಣ್ಣ ಅವರ ಸಹಕಾರದಲ್ಲಿ ಇವೆರಡು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.

ಈ ವೇಳೆ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎಚ್.ರಮೇಶ್, ಬನ್ನಿಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಲರಾಜು, ಸದಸ್ಯರಾದ ಹೊಂಬೇಗೌಡ, ವೆಂಕಟೇಶ್, ಮಾಜಿ ಸದಸ್ಯ ರಾಜು, ಮುಖಂಡರಾದ ಹನುಮಂತಯ್ಯ, ಮೀಸೆಹೊಂಬಣ್ಣ, ಚಂದ್ರು, ತಿಮ್ಮಣ್ಣ, ನಾಗರಾಜು, ಎಲ್ಐಸಿ ರಂಗಸ್ವಾಮಿ, ಪ್ರಭು ಮತ್ತಿತರರಿದ್ದರು.

6ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ತಾಲೂಕು ಬಿಡದಿ ಹೋಬಳಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜರಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಬಿಡದಿ ಆರ್ ಎಸ್ ಎಸ್ ಎನ್ ಸೊಸೈಟಿ ಅಧ್ಯಕ್ಷ ವಾಜರಹಳ್ಳಿ ಮಹೇಶ್ ಭೂಮಿಪೂಜೆ ನೆರವೇರಿಸಿದರು.