ಸಾರಾಂಶ
ಸಿಡಿಮದ್ದಿನ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬನಹಟ್ಟಿ ಮಂಗಳವಾರ ಪೇಟೆ ರಸ್ತೆಯಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯ ಸಿಡಿಮದ್ದುಗಳನ್ನು ಸುಡಲಾಯಿತು. ಇದರಿಂದ ಉಂಟಾದ ಅಪಾರ ಪ್ರಮಾಣದ ಪಟಾಕಿ ಕಸದ ರಾಶಿಯನ್ನು ಬುಧವಾರ ನಗರಸಭೆಯವರು ತೆರವು ಮಾಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಿಡಿಮದ್ದಿನ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬನಹಟ್ಟಿ ಮಂಗಳವಾರ ಪೇಟೆ ರಸ್ತೆಯಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯ ಸಿಡಿಮದ್ದುಗಳನ್ನು ಸುಡಲಾಯಿತು. ಇದರಿಂದ ಉಂಟಾದ ಅಪಾರ ಪ್ರಮಾಣದ ಪಟಾಕಿ ಕಸದ ರಾಶಿಯನ್ನು ಬುಧವಾರ ನಗರಸಭೆಯವರು ತೆರವು ಮಾಡಿದರು.ನಗರದ ಮಂಗಳವಾರ ಪೇಟೆಯ ವೃತ್ತದಿಂದ ಗಾಂಧಿವೃತ್ತ, ವೀರಭದ್ರೇಶ್ವರ ಲೇನ್‌ದವರೆಗೆ ವಾಸಿಸುವ ಅನೇಕ ಕುಟುಂಬಗಳು ಈ ಪಟಾಕಿಯ ಸದ್ದು ಹಾಗೂ ಹೊಗೆಯಿಂದ ಬೇಸತ್ತು ತಮ್ಮ ತಮ್ಮ ಮನೆ ಬಾಗಿಲ ಹಾಕಿಕೊಂಡಿದ್ದರು. ಅನೇಕ ಅಧಿಕಾರಿಗಳು ಈ ಪಟಾಕಿ ಸುಡುವುದನ್ನು ನಿಲ್ಲಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಭಕ್ತರು ತಮ್ಮ ಇಷ್ಟಾರ್ಥಕ್ಕಾಗಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಧಾರ್ಮಿಕತೆಗೆ ಧಕ್ಕೆ ಬಾರದಿರಲಿ ಎಂಬ ಸದುದ್ದೇಶದಿಂದ ಕೆಲವು ಅಧಿಕಾರಿಗಳು ಮೌನರಾಗಿದ್ದಾರೆಂದು ಹೇಳಲಾಗುತ್ತಿದೆ.
ಸುಟ್ಟ ಪಟಾಕಿಗಳ ಮದ್ದಿನ ಕಾಗದದ ಚೂರುಗಳು ೩ ಟ್ರ್ಯಾಕ್ಟರ್‌ನ ಟ್ರ್ಯಾಲಿಗಳಷ್ಟು ರಸ್ತೆ ಮೇಲೆ ಬಿದ್ದಿರುವುದನ್ನು ಸ್ವತಃ ಪೌರಾಯುಕ್ತ ಜಗದೀಶ ಈಟಿ ರಸ್ತೆಗಳಿದು ನೂರಾರು ಸಿಬ್ಬಂದಿಗಳಿಂದ ಸ್ವಚ್ಛತೆಯಲ್ಲಿ ಭಾಗಿಯಾಗಿದ್ದರು.