ದೇವಾಲಯ ಜೀರ್ಣೋದ್ಧಾರಕ್ಕೆ ಭಕ್ತರ ಸಹಕಾರ ಅಗತ್ಯ

| Published : May 02 2025, 12:08 AM IST

ಸಾರಾಂಶ

ಪಟ್ಟಣದ ಎತ್ತರದ ಸ್ಥಳದಲ್ಲಿ ನೆಲೆಸಿರುವ ಗಂಗಾಧರೇಶ್ವರ ದೇವಾಲಯ ಮಾತ್ರ ಇನ್ನು ಪುನರ್ ನಿರ್ಮಾಣದ ನಿರೀಕ್ಷೆಯಲ್ಲಿದ್, ಈ ದೇವಾಲಯದ ಜೀರ್ಣೋದ್ಧಾರಕ್ಕೆ ತಕ್ಷಣ ಕ್ರಮವಹಿಸುವಂತೆ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ಎತ್ತರದ ಸ್ಥಳದಲ್ಲಿ ನೆಲೆಸಿರುವ ಗಂಗಾಧರೇಶ್ವರ ದೇವಾಲಯ ಮಾತ್ರ ಇನ್ನು ಪುನರ್ ನಿರ್ಮಾಣದ ನಿರೀಕ್ಷೆಯಲ್ಲಿದ್, ಈ ದೇವಾಲಯದ ಜೀರ್ಣೋದ್ಧಾರಕ್ಕೆ ತಕ್ಷಣ ಕ್ರಮವಹಿಸುವಂತೆ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು. ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ದೇವಿಯ ಪ್ರತಿಷ್ಠಾಪನ ಮಹೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ಕುಂಭಕಳಶ ಪ್ರತಿಷ್ಠಾಪನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಪುನಃ ನವೀಕರಣಗೊಂಡ ದೇವಾಲಯಗಳು ನಮ್ಮ ಸಂಸ್ಕೃತಿಯ ಸಂಜೀವಿನಿಯಂತೆ ಭಕ್ತರಲ್ಲಿ ನಂಬಿಕೆಯನ್ನು ತುಂಬುತ್ತವೆ. ಗಂಗಾಧರೇಶ್ವರ ದೇವಾಲಯವು ಎತ್ತಿನ ಬೆಟ್ಟದ ಮೇಲೆ ಇರುವ ಕಾರಣದಿಂದಾಗಿ ಸವಲತ್ತುಗಳಿಂದ ವಂಚಿತತಾಗಿದೆ. ಪುನರ್ ನಿರ್ಮಾಣದೊಂದಿಗೆ ಮೂಲ ಸೌಲಭ್ಯಗಳ ಸಹಿತ ಅಭಿವೃದ್ಧಿ ಅಗತ್ಯವಿದೆ ಎಂದು ತಿಳಿಸಿದರು.ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿಯು ಮಾತನಾಡಿ, ಪಟ್ಟಣದ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲಯಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದ ಪವಿತ್ರ ಸ್ಥಳಗಳು. ಇವು ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿರುವುದರಿಂದ ಶಾಶ್ವತತೆಯ ಸಂಕೇತವಾಗಿವೆ ಎಂದರು.ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ನಿಜಕ್ಕೂ ಕೂಡ ನಾವೆಲ್ಲರೂ ಹಿಂದುಗಳಾಗಿ ಹುಟ್ಟಿರುವುದು ಹೆಮ್ಮೆಯ ಸಂಗತಿ. ದೇವರ ಕಾರ್ಯದಲ್ಲಿ ಎಲ್ಲರೂ ಭಾಗಿ ಆಗಿ ಒಂದೆಡೆ ಸೇರಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುವುದು ನಮ್ಮ ಹಿರಿಯದಿಂದ ಬಂದ ಬಳುವಳಿ. ಅದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಿವುದು ನಮ್ಮ ಕರ್ತವ್ಯ. ಕಣ್ಣಪ್ಪ ದೇವಸ್ಥಾನದ ಸಮುದಾಯ ಭವನದ ಅಭಿವೃದ್ಧಿಗೆ ನಾನು ಸಹಾಯ ಮಾಡುತ್ತೇನೆ ಕ್ಷೇತ್ರದ ಶಾಸಕ ಗೃಹ ಗೃಹ ಸಚಿವರಾದ ಪರಮೇಶ್ವರ್ ಕೂಡ ಇದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡುವ ಶಕ್ತಿ ಶಕ್ತಿ ದೇವತೆಗಳು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.ದೇವಾಲಯ ಸಮಿತಿಯ ಅಧ್ಯಕ್ಷ ಎಡಿ ಬಲರಾಮಯ್ಯ ಮಾತನಾಡಿ, ಕೋಟೆ ಮಾರಮ್ಮ ದೇವಿಗೆ ಅಪಾರ ಭಕ್ತರ ನಂಬಿಕೆ ಇದೆ. ಪ್ರತಿಯೊಬ್ಬ ಭಕ್ತರೂ ಉದಾರ ಮನಸ್ಸಿನಿಂದ ಧನಸಹಾಯ ಮಾಡಿರುವುದರಿಂದ ದೇವಾಲಯದ ನಿರ್ಮಾಣ ಅದ್ಭುತವಾಗಿ ಪೂರ್ತಿಯಾಗಿದೆ, ಎಂದು ವಿವರಿಸಿದರು. ಇದರಿಂದ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಧಾರ್ಮಿಕ ಚಟುವಟಿಕೆಗಳಿಗೆ ಪ್ರೇರಣೆ ದೊರಕಿದೆ ಎಂದರು.ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಖಜಾಂಚಿ ಕೆ.ಎನ್. ಲಕ್ಷ್ಮೀನಾರಾಯಣ, ನಿರ್ದೇಶಕರಾದ ಮುರುಳಿ ಮೋಹನ್, ಆರ್. ರಾಜು, ಸದಸ್ಯರಾದ ಕೆ.ಬಿ.ಲೋಕೇಶ್, ಕೆ.ವಿ. ಪುರುಷೋತ್ತಮ್, ಪುನೀತ್, ನಾರಾಯಣ್, ಕೆ.ಬಿ. ಸುನಿಲ್ ಸೇರಿದಂತೆ ಇತರರು ಇದ್ದರು.