ಶ್ರೀ ಕೆಂಪಮ್ಮದೇವಿಗೆ ಹರಕೆ ತೀರಿಸಿದ ಭಕ್ತರು

| Published : Apr 29 2024, 01:30 AM IST

ಸಾರಾಂಶ

ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ಭಾನುವಾರ ಜರುಗಿತು.

ಗುಬ್ಬಿ: ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ಭಾನುವಾರ ಜರುಗಿತು. ಮುಂಜಾನೆ ಅಗ್ನಿಕೊಂಡ ಕಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತೀರಿಸಿದರು. ದೊಡ್ಡಗುಣಿ ಸೇರಿದಂತೆ ಸುತ್ತಮುತ್ತ ಹತ್ತಕ್ಕೂ ಹೆಚ್ಚು ಹಳ್ಳಿಯ ಭಕ್ತಾದಿಗಳು ಆಗಮಿಸಿ ತಾಯಿಯ ಆಶೀರ್ವಾದವನ್ನು ಪಡೆದರು. ಶ್ರೀ ಕೆಂಪಮ್ಮ ದೇವಿಗೆ ಹಣ್ಣಿನಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಕೆಂಪಮ್ಮ ದೇವಿ ಹಾಗೂ ನೇರಳೆಕೆರೆ ಗ್ರಾಮ ದೇವತೆಗಳ ಮೆರವಣಿಗೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.