ದಾಬಸ್‍ಪೇಟೆ: ಗುರುಪೂರ್ಣಿಮೆ ಪ್ರಯುಕ್ತ ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಶಿವಗಂಗೆ ಗಿರಿ ಪ್ರದಕ್ಷಿಣೆ ಮಾಡಿದರು
ದಾಬಸ್‍ಪೇಟೆ: ಗುರುಪೂರ್ಣಿಮೆ ಪ್ರಯುಕ್ತ ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಶಿವಗಂಗೆ ಗಿರಿ ಪ್ರದಕ್ಷಿಣೆ ಮಾಡಿದರು.
ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿ ತಿಂಗಳ ಹುಣ್ಣಿಮೆ ದಿನ ಶಿವಗಂಗೆ ಬೆಟ್ಟವನ್ನು ಭಕ್ತರು ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು, ಮುಂಜಾನೆ ಗಿರಿ ಪ್ರದಕ್ಷಿಣೆ ಮಾಡುತ್ತಾರೆ. ಗಿರಿ ಸುತ್ತುವುದರಿಂದ ಇಲ್ಲಿಗೆ ಬರುವ ಅನೇಕ ಭಕ್ತರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಮಕ್ಕಳಿಲ್ಲದವರು ಗಿರಿಪ್ರದಕ್ಷಿಣೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ ಎಂದರು.ಶಿವಗಂಗೆ ಗಿರಿಪ್ರದಕ್ಷಿಣಿ ಸಮಿತಿ ಸಂಚಾಲಕಿ ಶಾರದಾ ಮಾತನಾಡಿ, ನಮ್ಮ ತಂದೆ ಚಂದ್ರಪ್ಪನವರು ಆರಂಭಿಸಿದ ಗಿರಿಪ್ರದಕ್ಷಿಣಿಯನ್ನು ಇಂದು ಸಹಸ್ರಾರು ಭಕ್ತರು ಆಚರಣೆಯಲ್ಲಿಟ್ಟು ಗಿರಿ ಪ್ರದಕ್ಷಿಣೆ ಮಾಡುತ್ತಿರುವುದು ಸಂತಸ ತಂದಿದೆ. ಗಿರಿ ಪ್ರದಕ್ಷಿಣೆ ದೈಹಿಕ ವ್ಯಾಯಾಮ, ಜೊತಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ತಿಂಗಳಿಗೊಮ್ಮೆ ಇಲ್ಲಿ ಬಂದು ಗಿರಿ ಪ್ರದಕ್ಷಿಣೆ ಹಾಕಿ ದರೆ ಒಳಿತಾಗುತ್ತದೆ ಎಂಬುದು ಭಕ್ತರ ನಂಬಿಕೆ ಎಂದರು.
ಗಿರಿಪ್ರದಕ್ಷಿಣೆಯಲ್ಲಿ ಎಡೇಹಳ್ಳಿ ಪ್ರದೀಪ್, ಗೌರಾಪುರ ರುದ್ರೇಶ್, ರಾಕೇಶ್ ಕುಮಾರ್, ಲಕ್ಷ್ಮೀನಾರಾಯಣ್ ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.ಪೋಟೋ 7 :
ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಹಾಗೂ ಭಕ್ತಾದಿಗಳು ಶಿವಗಂಗೆ ಗಿರಿ ಪ್ರದಕ್ಷಿಣೆ ಮಾಡಿದರು.