ಧಗ್ರಾಯೋ ಮೇಲೆ ದುರುದ್ದೇಶದ ಆರೋಪ

| Published : Sep 30 2024, 01:23 AM IST

ಸಾರಾಂಶ

ಕುಣಿಗಲ್ : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಾಲ ನೀಡುವುದಿಲ್ಲ ಕೇವಲ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ ಎoದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಸ್ವಷ್ಟಪಡಿಸಿದರು.

ಕುಣಿಗಲ್ : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸಾಲ ನೀಡುವುದಿಲ್ಲ ಕೇವಲ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ ಎoದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಸ್ವಷ್ಟಪಡಿಸಿದರು. ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.

ಯೋಜನೆಯಲ್ಲಿ ಸಹಾಯ ಸಂಘಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಜೊತೆಗೆ ಮಹಿಳೆಯರಿಗೆ ಆರ್ಥಿಕ ಗುಣಮಟ್ಟ ಹೆಚ್ಚಿಸುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಆದರೆ ಕೆಲವರು ದುರುದ್ದೇಶದಿಂದ ಯೋಜನೆ ಮೇಲೆ ಆರೋಪ ಮಾಡಿದ್ದು ಅದಕ್ಕೆ ಜನರು ಮನ್ನಣೆ ನೀಡಬಾರದು ಎಂದರು.

ಈ ವೇಳೆ ಕೆ. ಚಿನ್ನ ಒಕ್ಕೂಟದ ಸದಸ್ಯರಿಗೆ ಬ್ಯಾಂಕಿಗ್ ಸಂಬಂಧ ಮಾಹಿತಿ ನೀಡಿದರು. ಧಗ್ರಾಯೋದ ಸತೀಶ್ ಶೇಟ್, ಹುಲಿಯೂರುದುರ್ಗ ನಟರಾಜ್,ಅಮೃತೂರು ವರ ಲಕ್ಷ್ಮಿ, ಮರೂರು ನಿರ್ಮಲ, ಸಂದೇಶ್, ಸಂಪತ್, ಸುರೇoದ್ರ , ವಸಂತ್, ನವೀನ್, ಸತೀಶ್, ಮಮತ, ಪ್ರಕಾಶ್ ಅನೇಕರಿದ್ದರು.