ಸಾರಾಂಶ
ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಧಾರವಾಡ ಜಿಲ್ಲೆ ಸಮೀಪದ ದೇವರಹುಬ್ಬಳ್ಳಿಯಲ್ಲಿ ನಡೆದಿದ್ದು, ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಧಾರವಾಡ: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಧಾರವಾಡ ಜಿಲ್ಲೆ ಸಮೀಪದ ದೇವರಹುಬ್ಬಳ್ಳಿಯಲ್ಲಿ ನಡೆದಿದ್ದು, ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ರೈತ ಕುಟುಂಬದ ದಂಪತಿಯಾದ ಈಶ್ವರ ಆರೇರ (82), ಅವರ ಪತ್ನಿ ಪಾರವ್ವ ಆರೇರ (73)ಮೃತ ದಂಪತಿ. ಕೆಲವು ತಿಂಗಳಿಂದ ಪಾರವ್ವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಭಾನುವಾರ ರಾತ್ರಿ ದಂಪತಿ ಒಟ್ಟಿಗೆ ಊಟ ಮಾಡಿ ಮಲಗಿದ್ದಾರೆ. ಬೆಳಗಾಗುವಷ್ಟರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.