ಡಯಾಬಿಟ್‌ ಆಸ್ಪತ್ರೆ ಗ್ರಾಮೀಣ ಜನರಿಗೆ ಅನುಕೂಲ: ಸಚಿವ ಆರ್.ಬಿ. ತಿಮ್ಮಾಪುರ

| Published : Jun 10 2024, 12:46 AM IST

ಡಯಾಬಿಟ್‌ ಆಸ್ಪತ್ರೆ ಗ್ರಾಮೀಣ ಜನರಿಗೆ ಅನುಕೂಲ: ಸಚಿವ ಆರ್.ಬಿ. ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಪಟ್ಟಣದಲ್ಲಿ ಡಯಾಬಿಟ್‌ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಡಯಾಬಿಟಿಸ್‌ ಆಸ್ಪತ್ರೆ ಲೋಕಾಪುರ ಪಟ್ಟಣದಲ್ಲಿ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿದ ರಾಮದುರ್ಗ ಪಟ್ಟಣದ ವೈದ್ಯ ಡಾ. ಸೈಯದಲಿ ಅಲ್ಲಿಸಾಹೇಬನವರ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಬಡಜನರಿಗೆ, ಕೂಲಿಕಾರರಿಗೆ, ಮಧ್ಯಮವರ್ಗದ ಜನರಿಗೆ ಲೋಕಾಪುರ ಪಟ್ಟಣದಲ್ಲಿ ಇಂತಹ ಆಸ್ಪತ್ರೆ ಅವಶ್ಯವಿತ್ತು. ಎಲ್ಲರೂ ಈ ಆಸ್ಪತ್ರೆಯಲ್ಲಿರುವ ವಿವಿಧ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿರಲು ಸಲಹೆ ನೀಡಿದರು.

ಖ್ಯಾತ ವೈದ್ಯ ಡಾ.ಗಿರೀಶ ಸೋನವಾಲಕರ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವರ ನಾಣ್ನುಡಿಯಿದೆ. ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅನಾರೋಗ್ಯ ಕಾಡುತ್ತಲಿದ್ದರೆ, ಯಾವ ಕೆಲಸ ಮಾಡಲೂ ಮನಸ್ಆ ಕೊಡಲಾಗದು. ಹೀಗಾಗಿ ಆರೋಗ್ಯಕ್ಕೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಡಾ.ಸೈಯದಲಿ ಅಲ್ಲಿಸಾಹೇಬನವರ ಮಾತನಾಡಿ, ಲೋಕಾಪುರ ಪಟ್ಟಣದಲ್ಲಿ ಕಡಿಮೆ ದರದಲ್ಲಿ ೨೪ ಗಂಟೆಗಳ ಕಾಲ ಬಡವರ, ಮಹಿಳೆಯರ, ಅನುಕೂಲಕ್ಕಾಗಿ ಈ ಅಸ್ಪತ್ರೆ ಲೋಕಾರ್ಪಣೆ ಮಾಡಲಾಗಿದೆ. ಎಲ್ಲರ ಸಹಕಾರ ನೀಡಿ ಅತಿ ಕಡಿಮೆ ದರದಲ್ಲಿ ಸೇವೆ ನೀಡಲಾಗುತ್ತದೆ. ಗ್ರಾಮಾಂತರ ಭಾಗದ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡಿ ಚಿಕಿತ್ಸೆ ನೀಡಲಾಗುವುದು ಎಂದರು.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ, ಹಿರೇಮಠದ ಮುಳ್ಳೂರ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿಪ್ಪಲಕಟ್ಟಿ-ಸಾಲಹಳ್ಳಿಯ ಆಭಿನವ ಪಟ್ಟಾಧೀಶ್ವರ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಖಜ್ಜಿಡೋಣಿಯ ಕೃಷಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ಎಚ್. ಮುಂಬರಡ್ಡಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬೆಳಗಾವಿ ವೈದ್ಯ ಡಾ.ಗಿರೀಶ ಸೋನವಾಲಕರ್, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಅಲ್ಲಾಸಾಹೇಬ ಯಾದವಾಡ, ಮಹಾವೀರ ಟೋಪಣ್ಣವರ, ಗುರುರಾಜ ಉದಪುಡಿ, ಎಫ್.ಆರ್. ನಾಡಗೌಡರ, ಸಗರೆಪ್ಪ ಮಾಸರಡ್ಡಿ, ದೇಸಾಯಿ ಡಂಗಿ, ರಫೀಕ್‌ ಬೈರಕದಾರ, ಆರ್.ಎನ್. ಅಣ್ಣಿಗೇರಿ, ರವೀಂದ್ರ ಹಗ್ಗದ, ಡಾ.ಖ್ಯಾತ ದಂತ ವೈದ್ಯ ಶಾನೂರಲಿ ಅಲ್ಲಿಸಾಹೇಬನವರ, ಆನಂದ ಅಣ್ಣಿಗೇರಿ, ಡಾ.ತಜೀನ್‌ ಅಲ್ಲಿಸಾಹೇಬನವರ, ಅಮೃತಾ ಅಣ್ಣಿಗೇರಿ ಹುಲಕುಂದದ ಆರ್. ಕಡಪಟ್ಟಿ ಮತ್ತು ಸಿಬ್ಬಂದಿ, ಲೋಕಾಪುರ ಸಮಸ್ತ ಬಾಂಧವರು ಇದ್ದರು.