ಡಿಜಿಟಲ್ ಫಾರ್ಮುಲಾ ಪರಿಣಾಮಕಾರಿ ಪ್ರಭಾವ: ಯೂಟ್ಯೂಬರ್‌

| Published : Jan 21 2024, 01:36 AM IST

ಸಾರಾಂಶ

ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್‌ಫೆಸ್ಟ್‌ನ ಎರಡನೇ ದಿನ ‘ಡಿಜಿಟಲ್ ಮಾಹಿತಿ ಹರಡುವಿಕೆಯ ಭವಿಷ್ಯ’ ಎಂಬ ವಿಚಾರಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಮಾಧ್ಯಮಗಳಲ್ಲಿ ಜಿಡಿಟಲ್‌ ಫಾರ್ಮುಲಾ ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ, ಮತ್ತದನ್ನು ಜನರೂ ಹೆಚ್ಚಾಗಿ ನೋಡುತ್ತಾರೆ, ಇಷ್ಟಪಡುತ್ತಾರೆ, ನಂಬುತ್ತಾರೆ. ರಾಜಕಾರಣಿಗಳು ಮಾತನಾಡುವ ಆಸಕ್ತಿಯುಳ್ಳವರಲ್ಲ. ಬದಲಾಗಿ ತಮಗೆ ಬೇಕಿದ್ದದ್ದನ್ನೇ ಹೆಚ್ಚೆಚ್ಚು ಮಾತನಾಡಲು ಬಯಸುವವರು. ಇದಕ್ಕಾಗಿಯೇ ಅವರು ಮಾಧ್ಯಮಗಳನ್ನು ನೆಚ್ಚುತ್ತಾರೆ. ಹೀಗಿರುವಾಗ ಮಾಧ್ಯಮಗಳೂ ತಮ್ಮ ಜವಾಬ್ದಾರಿಯನ್ನು ಮರೆತಿವೆ.ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್‌ಫೆಸ್ಟ್‌ನ ಎರಡನೇ ದಿನ ‘ಡಿಜಿಟಲ್ ಮಾಹಿತಿ ಹರಡುವಿಕೆಯ ಭವಿಷ್ಯ’ ಎಂಬ ಶೀರ್ಷಿಕೆಯಲ್ಲಿ ಶರಣ್ ಶೆಟ್ಟಿಯವರು ನಡೆಸಿಕೊಟ್ಟ ಈ ವಿಚಾರಗೋಷ್ಠಿಯಲ್ಲಿ ಕುಶಾಲ್ ಮೆಹ್ರಾ, ಅಭಿಜಿತ್ ಚಾವ್ಡಾ ಮತ್ತು ವಿನಮ್ರೆ ಕಸನಾ ಹಂಚಿಕೊಂಡ ಅನಿಸಿಕೆ ಇದು. ಮೂವರೂ ಯೂಟ್ಯೂಬ್‌ನಲ್ಲಿ ಬಹಳ ಸಕ್ರಿಯ ಮತ್ತು ಖ್ಯಾತರಾಗಿದ್ದಾರೆ.

ಕುಶಾಲ್ ಮೆಹ್ರಾ ಮಾತನಾಡುತ್ತಾ, ಯೂಟ್ಯೂಬ್‌ನಲ್ಲೂ ಅಷ್ಟೇ ಎಲ್ಲರೂ ವ್ಯೂಸ್‌ಗಳ ಹಿಂದೆಯೇ ಓಡುತ್ತಿದ್ದಾರೆ. ನೈತಿಕವಲ್ಲದ ವಿಚಾರಗಳೇ ಅದರಲ್ಲಿ ಹೆಚ್ಚು ಪ್ರಭಾವಶಾಲಿಯಾಗಿ ಜನರನ್ನು ತಲುಪುತ್ತದೆ ಎಂದರು. ಅಭಿಜಿತ್ ಚಾವ್ಡಾ ಮಾತನಾಡಿ, ಕಂಟೆಂಟ್‌ ತಯಾರಿಸುವಾಗ ನಮ್ಮ ಆಸಕ್ತಿಯೇನು, ಆ ಕಂಟೆಂಟ್‌ನ ಉದ್ದೇಶವೇನು ಎಂಬುದನ್ನು ಮೊದಲು ಖಚಿತಪಡಿಸಬೇಕು. ನೈತಿಕತೆಗೆ ಬಹಳ ಒತ್ತುಕೊಡಬೇಕು. ಯುವಕರು ವಾರ್ತೆಗಳನ್ನು ಇಷ್ಟಪಡಿಸುವುದಿಲ್ಲ. ಈ ಖಾಲಿತನ ತುಂಬಲು ಯೂಟ್ಯೂಬರ್‌ಗಳು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕಂಟೆಂಟ್‌ ತುಂಬಾ ಡಿಜಿಟಲ್‌ ಆಗಿದೆ ಎಂದರು. ಬಾಂಗ್ಲಾ ದೇಶದ ಹಿಂದುಗಳು: ಸುರಭಿ ಹೂಡಿಗೆರೆ ನಡೆಸಿಕೊಟ್ಟ ಈ ವಿಚಾರಗೋಷ್ಠಿಯಲ್ಲಿ ಇತಿಹಾಸಕಾರರಾದ ದೀಪ್ ಹಾಲ್ದರ್, ಜೈದೀಪ್ ಮಜುಂದಾರ್ ಮತ್ತು ಶಿವಂ ರಘುವಂಶಿ ತಮ್ಮ ಮಾತನ್ನಿಟ್ಟರು.

ದೀಪ್ ಹಾಲ್ದರ್‌ ಅವರು, ದೆಹಲಿ ಮತ್ತು ಢಾಕಾ ನಡುವಿನ ಸಂಬಂಧ ದೈನಂದಿನ ಜೀವನದ ಕುರಿತಲ್ಲ, ಬದಲಾಗಿ ಬಹಳ ಬೌದ್ಧಿಕವಾಗಿ ಇರುವಂಥದ್ದು. ಸರ್ಕಾರಗಳು ನಾವು ಉತ್ತಮ ಸಂಬಂಧ ಹೊಂದಿದ್ದೇವೆ ಎಂದರೂ ಸಮಾಜ ಮಾತ್ರ ಒಳ್ಳೆಯ ಸಂಬಂಧದಲ್ಲಿಲ್ಲ. ವಿದೇಶಗಳೂ ಬಾಂಗ್ಲಾದೇಶದೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಮುಸ್ಲಿಂ ತೀವ್ರವಾದಿಗಳಿಂದಾಗಿ ಇಡೀ ದೇಶವೇ ತೊಂದರೆ ಅನುಭವಿಸುತ್ತಿದೆ ಎಂದರು.

ಶಿವಂ ರಘುವಂಶಿ ಮಾತನಾಡಿ, ಬಾಂಗ್ಲಾದೇಶದ ಮುಸ್ಲಿಮರ ಗುರುತು ಓರ್ವ ಬಂಗಾಲಿಯ ಗುರುತನ್ನು ಹಿಂದಿಕ್ಕಿದೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹಲವಾರು ಮಹಿಳೆಯರ ಕೊಲೆ, ಅತ್ಯಾಚಾರಗಳನ್ನು ನೋಡಿದ್ದೇನೆ. ಇದಕ್ಕೆಕಾರಣ ಕೇವಲ ಅವರೆಲ್ಲರೂ ಒಂದು ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿದ್ದದ್ದಾರೆ ಎಂದರು.

ಜೈದೀಪ್ ಮಜುಂದಾರ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಒಂದು ಕಡೆಯಾದರೆ, ಉತ್ತರ ಭಾರತದಲ್ಲಿ ಭಾಷೆಗೆ ಆಧರಿಸಿದ ಕಿರುಕುಳ ಕಾಣಸಿಗುತ್ತದೆ. ಬಾಂಗ್ಲಾದೇಶಿ ಹಿಂದೂಗಳು ಅಲ್ಲಿ ತಮ್ಮ ಸಂಕಟವನ್ನು ಅಲ್ಲಗೆಳೆಯುತ್ತಾರೆ. ಅಲ್ಲಿ ಚುನಾವಣೆಗಳು ಕೇವಲ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ದಾರಿ ಮಾಡಿಕೊಡುವುದಷ್ಟೇ. ಢಾಕಾದಲ್ಲಿನ ಬಹಳ ಜನರು ಭಾರತದ ಕೊಡುಗೆಯನ್ನುಅರಿತಿದ್ದರೂ, ಅದಕ್ಕೂ ತುಂಬಾ ಹೆಚ್ಚು ಮಂದಿ ಅಲ್ಲಿ ನಮ್ಮಕೊಡುಗೆಯನ್ನು ಮರೆತಿದ್ದಾರೆ, ಅಥವಾ ತಿಳಿದಿಲ್ಲ ಎಂದರು.