ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸಹಕಾರ ಕ್ಷೇತ್ರಗಳಿಂದ ಗ್ರಾಮೀಣ ಭಾಗದ ರೈತರು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗುತ್ತಿದ್ದು ಶೀಘ್ರದಲ್ಲೇ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ ಡಿಜಿಟಲೀಕರಣವಾಗಲಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಹೇಳಿದರು.ಪಟ್ಟಣದ ಆರ್ ವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಹಕಾರ ಸಂಸ್ಥೆಗಳು ಪ್ರಮುಖ ಆಧಾರಸ್ತಂಭವಾಗಿದ್ದು
ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಸೌಲಭ್ಯಯುತ ಸಾಲ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ, ಹಾಲು ಉತ್ಪಾದನಾ ಸಹಕಾರಿ ಸಂಘಗಳ ಅಭಿವೃದ್ಧಿ, ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳು ಇವೆಲ್ಲವೂ ಗ್ರಾಮೀಣ ಜೀವನಮಟ್ಟವನ್ನು ಎತ್ತುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.ಎಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್ ಮಾತನಾಡಿ, ಸಹಕಾರ ಕ್ಷೇತ್ರ ಹಾಗೂ ಹೈನುಗಾರಿಕೆ ವಲಯ ರಾಜ್ಯದಲ್ಲಿ ಪ್ರಗತಿಯತ್ತ ಸಾಗುತ್ತಿರುವುದು ಇಲ್ಲಿಯ ಸಹಕಾರಿ ಬಂಧುಗಳ ಶ್ರಮ, ನಂಬಿಕೆ ಮತ್ತು ಶಿಸ್ತಿನ ಫಲವಾಗಿದೆ. ಕೃಷಿ ಮತ್ತು ಹೈನುಗಾರಿಕೆ ಗ್ರಾಮೀಣ ಜೀವನದ ಎರಡು ಬಲಸ್ತಂಭಗಳು. ಈ ಎರಡನ್ನೂ ಉತ್ತೇಜಿಸುವ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿರುವುದು ನಮ್ಮ ಸಹಕಾರಿ ಸಂಸ್ಥೆಗಳಾಗಿವೆ. ಈ ಸಹಕಾರ ಕ್ಷೇತ್ರ ಇಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಎಚ್ ಡಿ ದೇವೇಗೌಡ ಹಾಗೂ ಎಚ್ ಡಿ ರೇವಣ್ಣನವರ ಕನಸಿನ ಕೂಸಾದ ಸಹಕಾರ ಬ್ಯಾಂಕ್ ಇಂದು ರಾಷ್ಟ್ರೀಯ ಬ್ಯಾಂಕುಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈಗಾಗಲೇ ಸುಮಾರು ೧ ಲಕ್ಷ ರೈತರ ಸಾಲಮನ್ನಾ ನಮ್ಮ ಬ್ಯಾಂಕಿನಲ್ಲಿ ಮಾಡಿದ್ದು ಶಾಸಕ ಎಚ್ ಕೆ ಸುರೇಶ್ ಅವರ ಸಹಕಾರದಿಂದಾಗಿ ತಾಲೂಕಿನಲ್ಲಿರುವ ಎಲ್ಲಾ ೩೦ ಸಹಕಾರ ಕ್ಷೇತ್ರ ಗಳು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಈ ವೇಳೆ ಹಾಲು ಒಕ್ಕೂಟದ ನಿರ್ದೇಶಕ ರಾಮಚಂದ್ರೇಗೌಡ,ಹಾಗು ಜಿಲ್ಲಾ ಒಕ್ಕೂಟದ ಸಿದ್ದೇಶ್ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅದ್ಯಕ್ಷ ಎಸ್ ಎನ್ ಪ್ರಕಾಶ್ ಮಾತನಾಡಿದರು. ನೂತನ ಸಹಕಾರ ರತ್ನ ಪ್ರಶಸ್ತಿ ಪಡೆದ ಜಿಲ್ಲಾ ಅಧ್ಯಕ್ಷರಾದ ಸೋಮನಹಳ್ಳಿ ನಾಗರಾಜ್ ಅವರನ್ನು ಅಭಿನಂದಿಸಲಾಯಿತು. ಇದರ ಜೊತೆಯಲ್ಲಿ ಸಹಕಾರ ಕ್ಷೇತ್ರ ಎಂದು ಹೆಸರು ಗಳಿಸಿದ ಹಲವು ಸಹಕಾರ ಬ್ಯಾಂಕುಗಳ ಅಧ್ಯಕ್ಷರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಎಂ ಕೆ ಆರ್ ಸೊಮೇಶ್, ದೇವೇಗೌಡ, ಎಚ್ ಎಂ ದಿನೇಶ್, ಬಿ ಗಿರೀಶ್ ಬಿಡಿ . ಚಂದ್ರೇಗೌಡ ಸೌಜನ್ಯ ಜಯರಾಂ , ರಾಜಣ್ಣ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹರೀಶ್ ಗುರುಮೂರ್ತಿ ಇದ್ದರು.
;Resize=(128,128))
;Resize=(128,128))
;Resize=(128,128))