ಸಾರಾಂಶ
Digitization will make land records more accessible: MLA Vajjal
-ಲಿಂಗಸುಗೂರಿನಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಶಾಸಕ ವಜ್ಜಲ್ ಚಾಲನೆ
-----ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಭೂಮಾಪನ ಮತ್ತು ನೋಂದಣಿ ಇಲಾಖೆಯ ಎಲ್ಲಾ ದಾಖಲೆಗಳ ಡಿಜಿಟಲೀಕರಣಕ್ಕೆ ಸರ್ಕಾರ ಮುಂದಾಗಿದೆ. ದಾಖಲೆಗಳ ಡಿಜಿಟಲೀಕರಣ ಮಾಡುವುದರಿಂದ ಜನಸಾಮಾನ್ಯರಿಗೆ ಬೇಗ ಕೈಗೆ ಸಿಗುತ್ತವೆ. ಇದರಿಂದ ಭೂ ದಾಖಲೆ ಪಡೆಯಲು ರೈತರು ಕಂದಾಯ ಕಚೇರಿಗೆ ವೃತಾ ಅಲೆಯುವುದು ತಪ್ಪುತ್ತದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.ಸಹಾಯಕ ಆಯುಕ್ತ ಕಚೇರಿ ಹಳೆಯ ತಹಸೀಲ್ದಾರ ಕೊಠಡಿಯಲ್ಲಿ ಭೂದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂ ದಾಖಲೆಗಳು ಅತ್ಯಂತ ಹಳೆಯದಾಗಿವೆ. ಅವುಗಳ ರಕ್ಷಣೆ ಸವಾಲಿನ ಕೆಲಸವಾಗಿದೆ. ಸರ್ಕಾರ ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿಟಲೀಕರಣ ದಾಖಲೆಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಇದರಿಂದ ದಾಖಲೆಗಳನ್ನು ಪಡೆದುಕೊಳ್ಳುವ ತೊಂದರೆ ನಿವಾರಿಸಬಹುದು, ಇದರ ಜೊತೆಗೆ ತಿದ್ದಲು ಅಸಾಧ್ಯ, ಡಿಜಿಟಲೀಕರಣ ಮಾಡುವುದರಿಂದ ಭೂ ದಾಖಲೆಗಳ ರಕ್ಷಣೆಯ ಜೊತೆಗೆ ಜನರಿಗೂ ಸುಲಭವಾಗಿ ದೊರೆಯುತ್ತವೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 20 ಲಕ್ಷಕ್ಕೂ ಅಧಿಕ ಭೂ ಮಾಪನ ಮತ್ತು ನೋಂದಣಿ ಇಲಾಖೆ ದಾಖಲೆಗಳು ಇದ್ದು ಒಟ್ಟು 06 ಜನ ಕಂಪ್ಯೂಟರ್ ಸಿಬ್ಬಂದಿ ದಿನಂಪತ್ರಿ ದಾಖಲೆಗಳನ್ನು ಡಿಜಿಟಲಿಕರಣ ಮಾಡುತ್ತಾರೆ.ಈ ವೇಳೆ ಸಹಾಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಶಂಶಾಲಂ. ಗ್ರೇಡ್-02 ತಹಸೀಲ್ದಾರ ಬಸವರಾಜ ಝಳಕಿಮಠ, ಅಭಿಲೇಖಾಲಯದ ಜಾವೇದ ಇಮ್ರಾನ್ ಇದ್ದರು.
---------------ಫೋಟೊ: ಲಿಂಗಸುಗೂರು ಪಟ್ಟಣದ ಸಹಾಯಕ ಆಯುಕ್ತ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು.
13ಕೆಪಿಎಲ್ಎನ್ಜಿ01