ಕೃಷಿ ಜತೆ ಹೈನುಗಾರಿಕೆಗೆ ಮಹತ್ವ ನೀಡಿ: ಶಾಸಕ ಯಶವಂತರಾಯಗೌಡ

| Published : Mar 28 2025, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಭಾರತ ಶೇ.80ರಷ್ಟು ಪ್ರತಿಶತ ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಯ ಜೊತೆಗೆ ಪಶುಪಾಲನೆ ಕೂಡ ಮಹತ್ವದಸ್ಥಾನ ಪಡೆದುಕೊಂಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಭಾರತ ಶೇ.80ರಷ್ಟು ಪ್ರತಿಶತ ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಯ ಜೊತೆಗೆ ಪಶುಪಾಲನೆ ಕೂಡ ಮಹತ್ವದಸ್ಥಾನ ಪಡೆದುಕೊಂಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ವಿಜಯಪುರ ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ,ಪಶುಪಾಲನಾ, ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆರ್.ಐ.ಡಿ.ಎಫ್ ಬ್ರ್ಯಾಂಚ್ 30ರ ಅಡಿಯಲ್ಲಿ ಪಶು ಚಿಕಿತ್ಸಾಕೇಂದ್ರದ ನೂತನ ಕಟ್ಟಡದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದರು. ಕೃಷಿಯ ಜೊತೆ ಪಶುಪಾಲನೆ ಅತ್ಯಂತ ಪ್ರಮುಖ ಲಾಭದಾಯಕ ಉದ್ಯೋಗವಾಗಿದ್ದು, ರೈತಾಪಿ ವರ್ಗ ಮಿಶ್ರಬೇಸಾಯ ಪದ್ದತಿ ಜೊತೆ ಪಶುಪಾಲನೆ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು. ಜಾನುವಾರುಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಾದರೆ ದೂರದ ಪಶು ಆಸ್ಪತ್ರೆಗಳಿಗೆ ಸುತ್ತಾಡುವ ಪರಸ್ಥಿತಿ ಇತ್ತು .ಈ ಭಾಗದ ರೈತರ ಬಹುದಿನಗಳ ಬೇಡಿಕೆ ಇಡೇರಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು, ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಅಗರಖೇಡ ಶ್ರೀಮಠದ ಅಭಿನವ ಪ್ರಭುಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧನರಾಜ ಮುಜಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಹಸೀಲ್ದಾರ್‌ ಕಡಕಭಾವಿ, ಪಶುಇಲಾಖೆ ಜಿಲ್ಲಾ ನಿರ್ದೇಶಕ ಗೊಣಸಗಿ, ಪಶು ಇಲಾಖೆ ತಾಲೂಕಾಧಿಕಾರಿ ಅಡಕಿ, ಡಾ.ಮಿರ್ಜಿ, ಗೌರೀಶಂಕರ ಬಾಬಳಗಾಂವ, ಹಣಮಂತರಾಯಗೌಡ , ಸೋಮನಿಂಗಗೌಡ ಪಾಟೀಲ, ಸುರೇಶ ವಾಲಿ, ಮಲಕಣ್ಣಾ ಗೆಬ್ಬೇವಾಡ, ಈರಣ್ಣಾ ವಾಲಿ, ಧನರಾಜ ಮುಜಗೊಂಡ, ಎ.ಪಿ ಕಾಗವಾಡಕರ್, ಜೀತಪ್ಪ ಕಲ್ಯಾಣಿ, ಅಶೋಕ ಪ್ಯಾಟಿ, ಸಿದ್ದರಾಯಗೌಡ ಪಾಟೀಲ, ಸಣ್ಣಪ್ಪ ತಳವಾರ, ಕಿರಣ್‌ ಸಾಹುಕಾರ ವಾಲಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.