ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ನಿರ್ದೇಶಕರು ಅವಿರೋಧ ಆಯ್ಕೆ

| Published : Feb 21 2025, 11:45 PM IST

ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ನಿರ್ದೇಶಕರು ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 11 ಸ್ಥಾನಗಳಿಗೆ ನಿರ್ದೇಶಕರು ಅವಿರೋಧ ಆಯ್ಕೆಯಾದರು. ಫೆ.23ರಂದು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಒಟ್ಟು 11 ನಿರ್ದೇಶಕರ ಆಯ್ಕೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಪ್ರತ್ಯೇಕವಾಗಿ ಒಟ್ಟು 33 ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 11 ಸ್ಥಾನಗಳಿಗೆ ನಿರ್ದೇಶಕರು ಅವಿರೋಧ ಆಯ್ಕೆಯಾದರು.

ಫೆ.23ರಂದು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಒಟ್ಟು 11 ನಿರ್ದೇಶಕರ ಆಯ್ಕೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಪ್ರತ್ಯೇಕವಾಗಿ ಒಟ್ಟು 33 ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಹಿರಿಯ ನಾಯಕ ಸಿ.ಎನ್. ಪುಟ್ಟಸ್ವಾಮಿಗೌಡ ಹಾಗೂ ಕೆಪಿಸಿಸಿ ಸದಸ್ಯ ಸುರೇಶ್‌ ಚುನಾವಣೆ ನಡೆಯುವುದು ಬೇಡ ಎಂದು ನಿಶ್ಚಯಿಸಿ ಮಾತುಕತೆ ನಡೆಸಿ ಎಲ್ಲ ಸದಸ್ಯರ ಮನವೊಲಿಸಿದರು. ಪರಿಣಾಮ ಎಲ್ಲಾ 11 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ 7 ಸದಸ್ಯರು, ಕಾಂಗ್ರೆಸ್ ಪಕ್ಷದ ಬೆಂಬಲಿತ 4 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಸಾಲಗಾರರ ಕ್ಷೇತ್ರದ ಸಾಮಾನ್ಯ ವಿಭಾಗದಿಂದ ಚಿಕ್ಕತರಹಳ್ಳಿ ಸಿ.ಆರ್. ಮಧು, ದೊಡ್ಡತರಹಳ್ಳಿ ಮಂಜುನಾಥ, ಅಂಚೆ ಬೀರನಹಳ್ಳಿ ನಂಜುಂಡೇಗೌಡ, ಬೋಳಮಾರನಹಳ್ಳಿ ಲಿಂಗರಾಜು, ಐಕನಹಳ್ಳಿ ಐ.ಡಿ. ಉದಯಶಂಕರ್(ಪ್ರವರ್ಗ ಬಿ), ಪ್ರವರ್ಗ ಎ ಒಂದು ಸ್ಥಾನಕ್ಕೆ ಕಡಹೆಮ್ಮಿಗೆ ತಿಮ್ಮೇಗೌಡ(ಪ್ರವರ್ಗ ಎ), ಜಿ.ಜೆ. ಸವಿತಾ(ಮಹಿಳಾ ಮೀಸಲು)ಆಯ್ಕೆಯಾದರು.

ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಅಂಚೆಬೀರನಹಳ್ಳಿ ಲೋಕೇಶ, ಐಕನಹಳ್ಳಿ ಐ.ಎಂ. ಮಂಜೇಗೌಡ(ಸಾಮಾನ್ಯ ವರ್ಗ), ಮಂಜುಳಮ್ಮ(ಮಹಿಳಾ ಮೀಸಲು),ದೇವಮ್ಮ(ಪರಿಶಿಷ್ಟ ಜಾತಿ)ಅವರನ್ನುಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ನಿರ್ದೇಶಕರು ಗ್ರಾಮೀಣ ಪ್ರದೇಶದ ರೈತರ ಸಂಘವನ್ನು ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸಿ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಮುಖಂಡರಿಗೆ ಭರವಸೆ ನೀಡಿದರು.

ಈ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಕಿಕ್ಕೇರಿ ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್. ಮಂಜುನಾಥ್, ದಾನಶೇಖರ್, ಶಿಶುಪಾಲ ಮುಂತಾದವರು ಇದ್ದರು.