ಸಾರಾಂಶ
ಬಿಜೆಪಿ ಎರಡು ಬಣಗಳ ನಡುವೆ ಮತ್ತೆ ಭಿನ್ನಮತ ಭುಗಿಲೆದ್ದಿದೆ. ವಿಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಬೆಂಬಲಿಗರ ನಡುವೆ ಕಚೇರಿಯಲ್ಲಿ ವಾಗ್ವಾದ ನಡೆಯಿತು.
ಬಾಗಲಕೋಟೆ: ವಕ್ಫ್ ವಿರುದ್ಧ ಬಿಜೆಪಿ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ಮುನ್ನವೇ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹೈಡ್ರಾಮಾ ನಡೆದಿದೆ.
ಬಿಜೆಪಿ ಎರಡು ಬಣಗಳ ನಡುವೆ ಮತ್ತೆ ಭಿನ್ನಮತ ಭುಗಿಲೆದ್ದಿದೆ. ವಿಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಬೆಂಬಲಿಗರ ನಡುವೆ ಕಚೇರಿಯಲ್ಲಿ ವಾಗ್ವಾದ ನಡೆಯಿತು. ಬಿಜೆಪಿಯಿಂದ ಉಚ್ಚಾಟನೆಗೊಂಡವರು ಪ್ರತಿಭಟನೆ ಬಂದರೆ ನಾವು ಪ್ರತಿಭಟನೆಗೆ ಬರೋದಿಲ್ಲ ಎಂದು ಮಾಜಿ ಶಾಸಕ ಚರಂತಿಮಠ ಬೆಂಬಲಿಗರು. ನಾವು ಬಂದೇ ಬರುತ್ತೇವೆ ಎಂದು ವಿಪ ಸದಸ್ಯ ಪೂಜಾರ ಬೆಂಬಲಿಗರು ಪಟ್ಟು ಹಿಡಿದರು.ಗೊಂದಲ ಸರಿಪಡಿಸಲು ಕಚೇರಿಯಲ್ಲಿ ಬಿಜೆಪಿ ಮುಖಂಡರು ಗೌಪ್ಯ ಸಭೆ ನಡೆಸಿದರು. ಮೇಲ್ಮಹಡಿ ಮೆಟ್ಟಿಲು ಬಾಗಿಲು ಎದುರು ಕಾರ್ಯಕರ್ತರು ವಾಗ್ವಾದ ನಡೆಸಿದರೆ ಮೆಲ್ಮಹಡಿ ಬಾಗಿಲು ಬಂದ್ ಮಾಡಿ ಹೊರಗೆ ಕಾರ್ಯಕರ್ತರು ನಿಂತರು. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ನೇತೃತ್ವದಲ್ಲಿ ಎರಡು ಬಣಗಳ ಮುಖಂಡರಾದ ವಿಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರೊಂದಿಗೆ ಸಭೆ ನಡೆಯಿತು.
ಸಭೆ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನೆ ಮೆರವಣಿಗೆ ಹೊರಟರು. ಮೆರವಣಿಗೆಯಿಂದ ವಿಪ ಸದಸ್ಯ ಪೂಜಾರ ಹೊರಗುಳಿದರು. ಅತ್ತ ಬಿಜೆಪಿ ಪ್ರತಿಭಟನೆ ನಡೆಸಿದರೆ ಇತ್ತ ಬಿಜೆಪಿ ಕಚೇರಿಯಲ್ಲಿ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಬೆಂಬಲಿಗರ ಸಭೆ ನಡೆಯಿತು.