ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಪ್ರತಿ ದಿನವೂ ಮಳೆ, ಚಳಿ ಎನ್ನದೆ ಸೂರ್ಯ ಉದಯುಸುವ ಮುನ್ನ ಮನೆಯ ಮುಂದೆ ದಿನಪತ್ರಿಕೆಯನ್ನು ಹಾಕುವ ಕೆಲಸ ಕಷ್ಟಕರ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಹೇಳಿದರು.ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ತಾಲೂಕು ಹಸಿರು ಸೇನೆ ರೈತ ಸಂಘದ ವತಿಯಿಂದ ಪತ್ರಿಕಾ ವಿತರಕರ ದಿನದ ಅಂಗವಾಗಿ ಪತ್ರಿಕಾ ಏಜೆಂಟ್ ರು ಹಾಗೂ ಪತ್ರಿಕೆ ಹಂಚುವ ಹುಡುಗರಿಗೆ ಸಿಹಿ ಹಂಚಿ ಮಾತನಾಡಿದ ಅವರು, ಪತ್ರಿಕೆಯನ್ನು ಹಂಚುವುದು ಕೂಡ ಒಂದು ರೀತಿ ಸೇವೆ ಮಾಡಿದಂತೆ ನಾವು ಇಂತಹವರನ್ನು ಗುರುತಿಸುವ ಕೆಲಸ ಮಾಡಬೇಕು. ಹುಡುಗರು ಓದಿನ ಸಮಯದಲ್ಲಿ ಬೆಳಗಿನ ಹೊತ್ತು ಪತ್ರಿಕೆ ಹಂಚಿ ನಂತರ ಶಾಲೆಗೆ ತೆರಳುತ್ತಿದ್ದು ಪತ್ರಿಕಾ ವಿತರಕರ ದಿನಾಚರಣೆಯನ್ನು ರೈತ ಸಂಘ ಸೇರಿ ಆಚರಿಸುತ್ತಿರುವುದು ಸಂತೋಷ ತಂದಿದ್ದು ನಾವು ಹಲವು ವರ್ಷಗಳಿಂದಲೂ ಪತ್ರಿಕಾ ಏಜೆಂಟರಾದ ಶ್ರೀಧರ್ ರವರು ಈ ವೃತ್ತಿಯನ್ನೇ ಶ್ರದ್ಧೆಯಿಂದ ಮಾಡುತ್ತಿದ್ದು ರೈತ ಸಂಘ ಯಾವಾಗಲೂ ನಿಮ್ಮ ಪರವಾಗಿ ಇರುತ್ತೇವೆ ಎಂದು ಪತ್ರಿಕಾ ವಿತರಕರ ದಿನದ ಶುಭಾಶಯಗಳು ಎಂದು ತಿಳಿಸಿದರು.
ಪತ್ರಿಕಾ ಏಜೆಂಟರಾದ ಶ್ರೀಧರ್ ಮಾತನಾಡಿ, ರೈತ ಸಂಘವು ನಮ್ಮ ಕೆಲಸವನ್ನು ಗುರುತಿಸಿ ನಮ್ಮನ್ನು ಸನ್ಮಾನಿಸಿರುವುದು ಸಂತೋಷ ತಂದಿದ್ದು ನಾನು ಹಲವು ವರ್ಷಗಳಿಂದಲೂ ಇದೇ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಎಷ್ಟೇ ಕಷ್ಟಗಳು ಇದ್ದರೂ ಕೂಡ ಈ ವೃತ್ತಿಯನ್ನು ನಾನು ಬಿಟ್ಟಿಲ್ಲ ಮನೆ ಮನೆಗೆ ಪತ್ರಿಕೆಯನ್ನು ಹಂಚುವ ಸಮಯದಲ್ಲಿ ಸಾಕಷ್ಟು ಜನಗಳ ಪರಿಚಯವಾಗಲಿದ್ದು ಮಾಗಡಿ ತಾಲೂಕಿನಲ್ಲಿ ಪತ್ರಿಕೆ ಹಂಚುತ್ತಿರುವುದರಿಂದಲೇ ಹೆಚ್ಚು ಜನಕ್ಕೆ ನಾನು ಪರಿಚಯವಾಗಿದ್ದು ಈ ವೃತ್ತಿ ಮಾಡುವುದು ತುಂಬಾ ಕಷ್ಟವಾಗಿದ್ದು ಮನೆಯಲ್ಲಿ ಎಷ್ಟೇ ತೊಂದರೆ ಇದ್ದರೂ ಪತ್ರಿಕೆ ಮನೆಮನೆಗೆ ತಲುಪಿಸಿದ ನಂತರವೇ ನಮ್ಮ ವೈಯಕ್ತಿಕ ಕೆಲಸಗಳಿಗೆ ಹೋಗಬೇಕಾಗಿದ್ದು ಹಲವು ವರ್ಷಗಳಿಂದಲೂ ಈ ವೃತ್ತಿಯನ್ನು ಬಿಟ್ಟಲ್ಲ ಎಂದು ಹೇಳಿದರು.ರೈತ ಸಂಘದ ವತಿಯಿಂದ 20 ಕ್ಕೂ ಹೆಚ್ಚು ದಿನಪತ್ರಿಕೆ ಹಂಚುವ ಹುಡುಗರಿಗೆ ಸಿಹಿ ವಿತರಣೆ ಹಾಗೂ ಹಿರಿಯ ಏಜೆಂಟರಾದ ಶ್ರೀಧರ್ ರವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್ಆರ್ ಮಾದೇಶ್ ಪ್ರಧಾನ ಕಾರ್ಯದರ್ಶಿ ಸಿ.ಕೆ. ಸುಧೀಂದ್ರ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬುಡನ್ ಸಾಬ್,ಗವಿನಾಗಮಂಗಲ ಶಿವಲಿಂಗಯ್ಯ, ಮೋಟೆಗೌಡನ ಪಾಳ್ಯ ರಘು, ಕಲ್ಲಹಳ್ಳಿ ಬಸವೇಶ್ವರ ದೇವಸ್ಥಾನದ ಶಿವಲಿಂಗಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.