ಮಕ್ಕಳಿಗೆ ಮೊಬೈಲ್ ನೀಡದೆ ಪುಸ್ತಕದ ಅಭಿರುಚಿ ಮೂಡಿಸಬೇಕು. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ಈಗ ದಾನಿ ನಾಗರಾಜು ಪ್ರೌಢಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕಿಕ್ಕೇರಿ:
ಮಾದಾಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳಿಗೆ ನೋಟ್‌ಬುಕ್, ಶಾಲಾ ಬ್ಯಾಗ್ ಮತ್ತಿತರ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ವೇಳೆ ಮಾತನಾಡಿದ ಗ್ರಾಮದ ಯೋಗೇಶ್, ಸರ್ಕಾರಿ ಶಾಲೆ ಉಳಿದರೆ ಮಾತ್ರ ಬಡವರು, ರೈತರ ಮಕ್ಕಳ ಭವಿಷ್ಯ ಬೆಳಗಲಿದೆ. ಬೆಂಗಳೂರಿನ ಹೊಸಕೋಟೆಯ ಸಮಾಜ ಸೇವಕ ಪುಷ್ಪಾ ನಾಗರಾಜು ಅವರು ಸರ್ಕಾರಿ ಶಾಲೆ ಉಳಿಸಲು ಕಳೆದ ವರ್ಷ ಇದೇ ಶಾಲೆಗೆ ಹಳ್ಳಿಗಾಡಿನ ಮಕ್ಕಳು ಸುರಕ್ಷಿತವಾಗಿ ಬರಲು ಉಚಿತವಾಗಿ 1 ವ್ಯಾನ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಇಂತಹ ದಾನಿಗಳಿಂದ ಸರ್ಕಾರಿ ಶಾಲೆ ಉಳಿಯಲು ಸಾಧ್ಯ ಎಂದರು.
ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಯತೀಶ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ನೀಡದೆ ಪುಸ್ತಕದ ಅಭಿರುಚಿ ಮೂಡಿಸಬೇಕು. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ಈಗ ದಾನಿ ನಾಗರಾಜು ಪ್ರೌಢಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ ಉಜ್ವಲ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ವಿನಂತಿಸಿದರು.ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 25 ಸಾವಿರ ರು. ನಗದು ಪುರಸ್ಕಾರ, ಗ್ರಾಪಂ ವ್ಯಾಪ್ತಿಯ ಮಾದಾಪುರ, ಮಾದಾಪುರ ಕೊಪ್ಪಲು, ಚಿನ್ನೇನಹಳ್ಳಿ, ಕೋಟಹಳ್ಳಿ, ಗೊಂದಿಹಳ್ಳಿ, ಗಾಣದಹಳ್ಳಿ, ಗೊಡೇಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್, ಬ್ಯಾಗ್, ನೀರಿನ ಬಾಟಲ್, ರೈನ್ ಕೋಟ್, ಆಟದ ಸಾಮಗ್ರಿ, ಸಮವಸ್ತ್ರ ವಿತರಿಸಲಾಯಿತು.
ಈ ವೇಳೆ ಮುಖಂಡರಾದ ಶೇಖರ್, ಯೋಗೇಶ್ ಎಂ.ಎನ್.ಮಾನಸ, ಚೇತನ್, ಎಂ.ಕೆ.ಕುಮಾರ್, ರಘು, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಆರ್.ಪ್ರದೀಪ್, ಮುಖ್ಯಶಿಕ್ಷಕರಾದ ಬಸವರಾಜಪ್ಪ, ಕುಮಾರ್, ದೇವರಾಜೇಗೌಡ, ಲವಣ್ಣ, ಶಿಕ್ಷಕರಾದ ಚನ್ನಕೇಶವ, ಚಂದ್ರಶೇಖರ್, ಶ್ರೀಧರ್, ಸವಿತಾ, ಪವಿತ್ರ, ಪುಷ್ಪ ಮತ್ತಿತರರಿದ್ದರು. 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈ ಭಾರತ್ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ ಆ.29 ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಆ. 28, 29 ಮತ್ತು 30 ರಂದು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಗರದ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ವಿವಿಧ ಸ್ಪರ್ಧೆಗಳ ವಿವರ:ಆ.28 ರಂದು ಬೆಳಿಗ್ಗೆ 9 ಗಂಟೆಗೆ ಪಾಸ್ ದಿ ಬಾಲ್ (ಪುರುಷರು ಮತ್ತು ಮಹಿಳೆಯರಿಗೆ) ಹಾಗೂ ಲೆಮನ್ ಅಂಡ್ ಸ್ಫೂನ್ (ಮಹಿಳೆಯರಿಗೆ ಮಾತ್ರ) ಸ್ಪರ್ಧೆಗಳಲ್ಲಿ 14 ವರ್ಷ ಮೇಲ್ಪಟ್ಟವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆ.29 ರಂದು ಬೆಳಿಗ್ಗೆ 6.30 ಗಂಟೆಗೆ ಪುರುಷರು ಮತ್ತು ಮಹಿಳೆಯರಿಗೆ 5 ಕಿ.ಮೀ. ರಸ್ತೆ ಓಟ (ಮ್ಯಾರಥಾನ್) ನಡೆಯಲಿದ್ದು, 14ರಿಂದ 29 ವರ್ಷದೊಳಗಿನವರು ಹಾಗೂ 30 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಆ ದಿನದಂದು ಬೆಳಗ್ಗೆ 9 ಗಂಟೆಗೆ 10 ಜನರ ತಂಡದ ಪುರುಷರು ಮತ್ತು ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಮೊದಲ 16 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ನಗದು ಬಹುಮಾನ ನೀಡಲಾಗುವುದು.ಆ.30ರಂದು ಬೆಳಗ್ಗೆ 7 ಗಂಟೆಗೆ ‘ಸಂಡೇಸ್ ಆನ್ ಸೈಕಲ್’ ಜಾಥಾ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ದೂ. ಸಂ. 8310970044, 8792544007, 7353097540 ಹಾಗೂ 9739972472 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.