ಸಾರಾಂಶ
ಕನಕಪುರ: ಮಹಿಳೆಯರು ಸ್ವ-ಉದ್ಯೋಗ ತರಬೇತಿ ಪಡೆದರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಸಮೃದ್ಧಿ ಶಿಕ್ಷಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾಲತೇಶ್ ತಿಳಿಸಿದರು.
ಕನಕಪುರ: ಮಹಿಳೆಯರು ಸ್ವ-ಉದ್ಯೋಗ ತರಬೇತಿ ಪಡೆದರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಸಮೃದ್ಧಿ ಶಿಕ್ಷಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾಲತೇಶ್ ತಿಳಿಸಿದರು. ನಗರದಲ್ಲಿ ಜಿಪಂ ಹಾಗೂ ಗ್ರಾಮೋದ್ಯಮ ಸಹಕಾರದಿಂದ ಸಮೃದ್ಧಿ ಶಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿ, ಮಹಿಳೆಯರು ಸಮಯ ವ್ಯರ್ಥ ಮಾಡದೆ ಸ್ವ-ಉದ್ಯೋಗ ಕೈಗೊಳ್ಳುವುದರಿಂದ ಕೌಟುಂಬಿಕ ಆರ್ಥಿಕ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ತರಬೇತಿ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ಟ್ರಸ್ಟ್ ಸದಸ್ಯರು ಹಾಗೂ ಶಿಕ್ಷಕ ವೃಂದದವರಿಂದ ಅಭಿನಂದನೆ ಸಲ್ಲಿಸಿದರು.