ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ12ನೇ ಶತಮಾನದ ಬಸವಾದಿ ಶಿವ ಶರಣರ ವಚನವಾದ "ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇತರರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ ". ಈ ವಚನವನ್ನು ಪಾಲಿಸಿದರೇ ಸಾಕು ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಅವರು ವಿದ್ಯಾರ್ಥಿಗಳಿಗೆ ವಚನ ಪಠಣ ಮಾಡಿದರು.ರಾಮನಾಥಪುರ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಉಚಿತ ವಚನ ಬುಕ್ಸ್‌ಗಳನ್ನು ನೀಡಿದ ನಂತರ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಅವರು ಕಳೆದ 23 ವರ್ಷಗಳಿಂದ ಈ ಶಾಲೆಗಳಲ್ಲಿ ಉಚಿತವಾಗಿ ವಚನ ಬುಕ್ಸ್ ಮತ್ತು ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿರುವುದಕ್ಕೆ ಶಿಕ್ಷಣಾಧಿಕಾರಿ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ, ತಾಲೂಕು ಮಾಜಿ ಅಧ್ಯಕ್ಷರು ಸಿದ್ದರಾಜು, ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್, ಹನ್ಯಾಳು ಶಾಲೆ ಮಹಾಮನೆಯ ಶಿಕ್ಷಕರು ಸಂತೋಷ್, ಮುತಗದ ಹೊಸೂರು ಶ್ರೀನಿವಾಸ್, ಮುಖ್ಯ ಶಿಕ್ಷಕರು ಎಚ್.ಜಿ. ಲೀಲಾವತಿ, ಸಹ ಶಿಕ್ಷಕರು ಹಾಗೂ ಪರಿಷತ್ತಿನ ಮಾಜಿ ಕಾರ್ಯದರ್ಶಿ ಎಂ.ಆರ್. ದೇವರಾಜ್, ವನೀತ, ಗೀತಾ, ಸುಜಾತ, ಶೃತಿ, ಪವಿತ್ರ ಮುಂತಾದವರು ಇದ್ದರು.