ಸಾರಾಂಶ
ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸೋಮವಾರಪೇಟೆ: ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ಅವರು ಹುಟ್ಟು ಹಬ್ಬ ಅಂಗವಾಗಿ ಎಂ ಅಂಡ್ ಎಂ ಅಭಿಮಾನಿಗಳ ಬಳಗ ವತಿಯಿಂದ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಅಭಿಮಾನಿ ಬಳಗದ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಶೀಘ್ರ ಗುಣಮುಖರಾಗಿರೆಂದು ಆಶಿಸಿದರು. ಈ ಸಂದರ್ಭ ಬಳಗದ ಕರ್ನಾಟಕ ರಾಜ್ಯಾಧ್ಯಕ್ಷ ತ್ರಿನೇಶ್, ಜಿಲ್ಲಾ ಘಟಕದ ಎಸ್.ಆರ್. ಕುಮಾರ್, ಸೋಮವಾರಪೇಟೆ ಘಟಕದ ಮಂಜು, ದಾಮೋಧರ್, ರವಿ ತಲ್ತರೆ, ನಿರಂಜನ್, ಧನಂಜಯ, ಅಜಯ್, ರಂಜಿತ್ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))