ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಚಿತ್ರಕಲಾ ಸ್ಪರ್ಧೆ ಯಶಸ್ವಿ

| Published : Nov 24 2025, 02:00 AM IST

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಚಿತ್ರಕಲಾ ಸ್ಪರ್ಧೆ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿರುವ ಅಡಗಿದ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿ, ಅವರಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಈ ವರ್ಷವೂ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಕ್ಕಳಲ್ಲಿ ಬಿಂಬಿಸುವ ಹೊಸ ಚಿಂತನೆ, ಕಲ್ಪನೆ ಮತ್ತು ಕೌಶಲ್ಯಗಳನ್ನು ಉತ್ತೇಜಿಸಲಿರುವ ಈ ಸ್ಪರ್ಧೆ, ಭವಿಷ್ಯದ ಕಲಾವಿದರಿಗೆ ಬಲವಾದ ವೇದಿಕೆಯಾಗಿ ಪರಿಣಮಿಸುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ೧೫ನೇ ಶೈಕ್ಷಣಿಕ ಸಮ್ಮೇಳನದ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು.ಇದೇ ವೇಳೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ. ರವಿ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳಲ್ಲಿರುವ ಅಡಗಿದ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿ, ಅವರಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಈ ವರ್ಷವೂ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಕ್ಕಳಲ್ಲಿ ಬಿಂಬಿಸುವ ಹೊಸ ಚಿಂತನೆ, ಕಲ್ಪನೆ ಮತ್ತು ಕೌಶಲ್ಯಗಳನ್ನು ಉತ್ತೇಜಿಸಲಿರುವ ಈ ಸ್ಪರ್ಧೆ, ಭವಿಷ್ಯದ ಕಲಾವಿದರಿಗೆ ಬಲವಾದ ವೇದಿಕೆಯಾಗಿ ಪರಿಣಮಿಸುತ್ತಿದೆ ಎಂದರು. ಪ್ರತಿ ಮಗುವಿನಲ್ಲೂ ತನ್ನದೇ ಆದ ವಿಶೇಷ ಸಾಮರ್ಥ್ಯ ಅಡಗಿದೆ. ಆ ಪ್ರತಿಭೆಯನ್ನು ಹೊರತರುವುದು ಶಿಕ್ಷಕರ ಹಾಗೂ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯಾಗಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳವರೆಗೆ ತಲುಪುವ ಅವಕಾಶವನ್ನು ಪಡೆಯಲಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆಗೆ ಮಕ್ಕಳ ಹಾಗೂ ಪೋಷಕರಿಂದ ಸಿಗುತ್ತಿರುವ ಬೆಂಬಲವೂ ಹೆಚ್ಚುತ್ತಿದ್ದು, ಕಾರ್ಯಕ್ರಮವು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಚಿತ್ರಕಲಾ ಸ್ಪರ್ಧೆಯ ಜೊತೆಗೆ ಶಿಕ್ಷಕರಿಗಾಗಿ ಪುನಶ್ಚೇತನ ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಬೆಳವಣಿಗೆಗೆ ಸಹ ಸಾಂಸ್ಥಿಕವಾಗಿ ಸಹಕಾರ ನೀಡಲಾಗುತ್ತಿದೆ. ಒಟ್ಟು ೩೬೦ಕ್ಕೂ ಹೆಚ್ಚು ಮಕ್ಕಳು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಕೈಚಳಕದ ಮೂಲಕ ವಿಭಿನ್ನವಾದ ಚಿತ್ರ ಬರೆದು ಗಮನಸೆಳೆದರು.ಪ್ರಮುಖವಾಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮತ್ತು ೧ರಿಂದ ೨ನೇ ತರಗತಿಮಕ್ಕಳು ಅವರಿಗೆ ಇಷ್ಟವಾದ ಚಿತ್ರವನ್ನು ಬಿಡಿಸದರು. ೩ರಿಂದ ೬ನೇ ತರಗತಿ ಮಕ್ಕಳಿಗೆ ಪರಿಸರ ಚಿತ್ರ ಬಿಡಿಸಲು ಅವಕಾಶ ಕೊಡಲಾಗಿತ್ತು. ೭ ರಿಂದ ೮ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ಕುರಿತು ಚಿತ್ರ ಬಿಡಿಸಲು ಅವಕಾಶವಿತ್ತು. ೯ ರಿಂದ ೧೦ನೇ ತರಗತಿಯ ಮಕ್ಕಳು ಹಬ್ಬ, ಜಾತ್ರೆ, ಉತ್ಸವ ಕುರಿತ ಚಿತ್ರ ಬಿಡಿಸಿದರು. ಪ್ರತಿ ವರ್ಗದ ಮಕ್ಕಳಿಂದ ವಿಷಯಾಧಾರಿತವಾಗಿ ವೈವಿಧ್ಯಮಯ ಕಲಾಕೃತಿಗಳನ್ನು ನಿರೀಕ್ಷಿಸಲಾಗುತ್ತಿದ್ದು, ಈ ಸ್ಪರ್ಧೆ ಮಕ್ಕಳ ಸೃಜನಶೀಲತೆ ಮತ್ತು ಕಲಾ ಪ್ರಪಂಚದ ಅರಿವನ್ನು ಮತ್ತಷ್ಟು ವಿಸ್ತರಿಸುವಂತಿದೆ ಎಂದು ಆಯೋಜಕರು ತಿಳಿಸಿದರು.ಇದೇ ವೇಳೆ ಚಿತ್ರಕಲಾ ನಿವೃತ್ತ ಶಿಕ್ಷಕ ಬಿ.ಎಸ್. ದೇಸಾಯಿ, ಸಂಘದ ಕಾರ್ಯದರ್ಶಿ ಎಚ್.ಎಂ. ರಮೇಶ್, ಖಜಾಂಚಿ ಲಿಂಗರಾಜು, ಚಂದ್ರಶೇಖರ್, ಅಬ್ದುಲ್ ನವಾಬ್, ಶೋಭಾ, ನಿವೇದಿತಾ, ವಿನೋಧ ಇತರರು ಉಪಸ್ಥಿತರಿದ್ದರು.