ಜೆಡಿಎಸ್ ಬಲವರ್ಧನೆಗೆ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಕರೆ

| Published : Mar 18 2024, 01:50 AM IST

ಸಾರಾಂಶ

ತಳಮಟ್ಟದಿಂದ ಜೆಡಿಎಸ್ ಬಲವರ್ಧನೆಗೆ ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು ಪಕ್ಷದ ಜಿಲ್ಲಾ ನೂತನ ಅಧ್ಯಕ್ಷ ಬಾಲರಾಜ ಗುತ್ತೇದಾರ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ತಳಮಟ್ಟದಿಂದ ಜೆಡಿಎಸ್ ಬಲವರ್ಧನೆಗೆ ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು ಪಕ್ಷದ ಜಿಲ್ಲಾ ನೂತನ ಅಧ್ಯಕ್ಷ ಬಾಲರಾಜ ಗುತ್ತೇದಾರ ಕರೆ ನೀಡಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಗೆ ಪಕ್ಷದ ಜಿಲ್ಲಾ ನೂತನ ಅಧ್ಯಕ್ಷ ಆಗಮಿಸಿದ್ದ ಹಿನ್ನೆಲೆ ಅವರನ್ನು ಪಕ್ಷದ ನಾಯಕಿ ಮಹೇಶ್ವರಿ ಎಸ್.ವಾಲಿ ಮತ್ತು ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಆಳಂದ ಕ್ಷೇತ್ರ ಒಳಗೊಂಡು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯಿದೆ. ಮತದಾರರಿದ್ದು ಅವರನ್ನು ಸಂಪರ್ಕಿಸುವ ಮೂಲಕ ತಳಮಟ್ಟದಿಂದ ಬಲವರ್ಧದನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಪಕ್ಷದ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ಬದ್ಧವಾಗಿದ್ದು, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆ ಆಗಬೇಕು ಏನೇ ಸಮಸ್ಸೆ ಇರಲಿ ಜೊತೆಯಲಿ ನಾನು ಬಂದು ನಿಲ್ಲುತ್ತೇನೆ ಎಂದು ಹೇಳಿದರು.

ಪಕ್ಷದ ನಾಯಕಿ ಮಹೇಶ್ವರಿ ಎಸ್.ವಾಲಿ ಮಾತನಾಡಿ, ತಾಲೂಕಿನಲ್ಲಿ ರೈತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಹಾಗೂ ಯುವಕರ ಜ್ವಲಂತ ಸಮಸ್ಯೆ ನಿವಾರಣೆಗೆ ಕಂಕಣಬದ್ಧವಾಗಿ ನಿಲ್ಲುತ್ತೇನೆ ಅಲ್ಲದೆ, ಆಳಂದ ಕ್ಷೇತ್ರದಲ್ಲೇ ಎಂದಿನಂತೆ ಠಿಕಾಣಿ ಹೂಡಿ ಜನರ ಸಮಸ್ಸೆಗೆ ಸ್ಪಂದನೆ ಮಾಡುತ್ತೇನೆ ಎಂದು ಹೇಳಿದರು.

ಈ ವೇಲೆ ಮುಖಂಡ ಬಸಯ್ಯ ಗುತ್ತೇದಾರ್ ಬಟ್ಟರಕಿ, ಶರಣಬಸಪ್ಪ ಉಜಳಂಬೆ, ಚಂದ್ರಕಾಂತ ಗದ್ದೆ. ವಿರೂಪಾಕ್ಷಪ್ಪ ಹನುಮಶೆಟ್ಟಿ, ವಿಶ್ವನಾಥ ಜಮಾದಾರ್, ಶಿವಕುಮಾರ್ ನಾಗೂರೆ, ಇಲಿಯಾಸ್ ಅನ್ಸಾರಿ. ಅನಿಲ್ ಕಾಟೆ. ಅಮೀರ್ ಅನ್ಸಾರಿ, ಶರಣು ಕುಲ್ಕರ್ಣಿ. ಜೈರಾಮ್ ರಾಥೋಡ್ ಸೇರಿ ಪಕ್ಷದ ಕಾರ್ಯಕರ್ತರಿದ್ದರು.