ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶುಕ್ರವಾರ ಮಕ್ಕಳ ದಿನಾಚಾರಣೆಯಂದು ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಏಕಕಾಲದಲ್ಲಿ ಪೋಷಕ-ಶಿಕ್ಷಕರ ಮಹಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಹೇಳಿದರು.ನಗರದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಕ್ಕಳ ದಿನಾಚಾರಣೆಯಂದು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಾರ್ಗದರ್ಶನ ಮಾಡಿ ಪೋಷಕ-ಶಿಕ್ಷಕ ಮಹಾ ಸಭೆಯನ್ನು ವ್ಯವಸ್ಥಿವಾಗಿ ಮಾಡುವಂತೆ ಸೂಚಿಸಿದ್ದು, ಅದರಂತೆ ಜಿಲ್ಲೆಯಲ್ಲೂ ಆಯೋಜಿಸಲಾಗಿದೆ ಎಂದರು.ಮುಖ್ಯಮಂತ್ರಿಗಳು ಬೆಂಗಳೂರು ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದು, ಈ ಕಾರ್ಯಕ್ರಮವು ಯುಟ್ಯೂಬ್ ಲೈವ್‌ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನೇರಪ್ರಸಾರದ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ), ಉಪನಿರ್ದೇಶಕರು(ಅಭಿವೃದ್ಧಿ) ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಸಭೆ ನಡೆಸಿ ಪೋಷಕ-ಶಿಕ್ಷಕ ಮಹಾಸಭೆಯನ್ನು ಸರ್ಕಾರವು ನೀಡಿರುವ ಸೂತ್ತೋಲೆಯಂತೆ ಯಶಸ್ವಿಯಾಗಿ ನಡೆಸಲು ಈಗಾಗಲೇ ಮಾರ್ಗದರ್ಶನ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ 825 ಸರ್ಕಾರಿ ಶಾಲೆಗಳಲ್ಲಿದ್ದು 1 ರಿಂದ 10ನೇ ತರಗತಿಯವರೆಗೆ ಒಟ್ಟು 50699 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಜಿಲ್ಲೆಯಲ್ಲಿ 25 ರಿಂದ 30 ಸಾವಿರ ಪೋಷಕರು ಹಾಜರಾಗುವ ನಿರೀಕ್ಷೆ ಇದೆ. ಶಾಲೆಯಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಪೋಷಕರನ್ನು ಆಹ್ವಾನಿಸುವ ಸ್ವಾತಂತ್ರ್ಯವನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ, ಪೋಷಕರ ಸಂಖ್ಯೆ ಹೆಚ್ಚಿದ್ದು ಸ್ಥಳಾವಕಾಶದ ಕೊರತೆ ಇದ್ದಲ್ಲಿ ಆ ಶಾಲೆಯ ಉನ್ನತ ತರಗತಿಯ ಪೋಷಕರನ್ನು ಸಂಖ್ಯೆಗೆ ಅನುಗುಣವಾಗಿ ಆಹ್ವಾನಿಸಿ ಸಭೆ ನಡೆಸಲು ತಿಳಿಸಲಾಗಿದೆ ಎಂದರು.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದ 2.15ರವರೆಗೆ ಮಹಾ ಸಭೆಯನ್ನು ನಡೆಸಲಿದ್ದು ವೇಳಾಪಟ್ಟಿಯನ್ನು ಪ್ರತಿ ಶಾಲೆಗೆ ನೀಡಿದ್ದು ಅದರಂತೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು.ಚಾಮರಾಜನಗರ ತಾಲೂಕಿನ ಚಂದಕವಾಡಿ ಕೆಪಿಎಸ್ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪತ್ರಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಕ-ಪೋಷಕ ಮಹಾಸಭೆಯಲ್ಲಿ ಪ್ರತಿ ಮಗುವಿನ ಶೈಕ್ಷಣಿಕ ಪ್ರಗತಿ, ಶಾಲಾ ಭೌತಿಕ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ದೊರೆಯುವ ಸವಲತ್ತುಗಳ ಬಗ್ಗೆ, ತಿಳಿಸುವುದು, ದಾನಿಗಳು ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ವಿಶೇಷ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ವಿದ್ಯಾರ್ಥಿಯ ವಿದ್ಯಾಭ್ಯಾಸದ ಪ್ರಗತಿಯನ್ನು ಪೋಷಕರಿಗೆ ತಿಳಿಸುವುದು, ಪೋಷಕರು ತಮ್ಮ ಮಕ್ಕಳ ಕಲಿಕೆ, ಶಿಸ್ತು, ವರ್ತನೆ ಕುರಿತಾಗಿ ಶಿಕ್ಷಕರಿಂದ ನೇರ ಮಾಹಿತಿ ಪಡೆಯಲು. ವಿದ್ಯಾರ್ಥಿಯ ಪ್ರಗತಿ ಮತ್ತು ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದರು,ಇಲಾಖೆಯ ಕಲಿಕಾ ಉಪಕ್ರಮಗಳು, ಪ್ರೋತ್ಸಾಯದಾಯಕ ಯೋಜನೆಗಳು, ಪಾಠ ಆಧಾರಿತ ಮೌಲ್ಯಮಾಪನದ ವಿಶೇಷಣೆ, ಭೌತಿಕ ಹಾಗೂ ಕಲಿಕಾ ಸೌಕರ್ಯಗಳು, ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಿಡಿಪಿಐ ಚಂದ್ರಕಾಂತಪಾಟೀಲ್, ಪಿಯು ಡಿಡಿ ಪುಟ್ಟಗೌರಮ್ಮ, ಡಯಟ್‌ನ ಪ್ರಾಂಶುಪಾಲ ಕಾಶೀನಾಥ್ ಇದ್ದರು.------೧೩ಸಿಎಚ್‌ಎನ್೧ಚಾಮರಾಜನಗರದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಮೋನಾ ರೋತ್ ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))