ಸಾರಾಂಶ
ವಿಭಾಗಮಟ್ಟದ ನಾಟಕ ಸ್ಪರ್ಧೆ । ರಾಣೆಬೆನ್ನೂರು ಸರ್ಕಾರಿ ಪ್ರೌಢಶಾಲೆಯ ತಂಡ ದ್ವಿತೀಯಕೊಪ್ಪಳ:
ತಾಲೂಕಿನ ಮುನಿರಾಬಾದ್ ಡಯಟ್‌ನಲ್ಲಿ ನಡೆದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಮಾವಿನಕಟ್ಟಿ ಸರ್ಕಾರಿ ಪ್ರೌಢಶಾಲೆಯ ತಂಡ ಪ್ರಥಮ ಸ್ಥಾನ ಪಡೆದಿದೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸರ್ಕಾರಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದಿದೆ. ಯಲಬುರ್ಗಾ ತಾಲೂಕಿನ ಮಂಗಳೂರು ಪಬ್ಲಿಕ್ ಶಾಲೆಯ ತಂಡ ತೃತಿಯ ಸ್ಥಾನ ಪಡೆದಿದೆ.
ವಿಭಾಗ ಮಟ್ಟದ ನಾಟಕ ಸ್ಪರ್ಧೆಯಲ್ಲಿ 7 ಜಿಲ್ಲೆಯ ತಂಡಗಳು ಭಾಗವಹಿಸಿದ್ದವು.ಉತ್ತಮ ನಟ ಪ್ರಶಸ್ತಿಯನ್ನು ಕೆಪಿಎಸ್ ಶಾಲೆಯ ವಿಜಯ ನಿಂಗಾಪುರ ಪಡೆದಿದ್ದಾರೆ. ಉತ್ತಮ ನಟಿ ಪ್ರಶಸ್ತಿಯನ್ನು ಕುರಗೋಡ ಗುರುಶಾಂತಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಗೀತಾ, ಉತ್ತಮ ರಚನೆಕಾರ, ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ ಮಾವಿನಕಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ವೆಂಕಟೇಶ್ವರ ಕೆ. ಪಡೆದುಕೊಂಡರು.
ನಿರ್ಣಾಯಕರಾಗಿ ಉಪನ್ಯಾಸಕರಾದ ಬಸವಂತಯ್ಯ ಎಚ್., ಶಿಕ್ಷಕ ಗುರುರಾಜ ಎಲ್., ರಾಮಣ್ಣ ಮಡಿವಾಳ ಕಾರ್ಯನಿರ್ವಹಿಸಿದ್ದಾರೆ.ಉದ್ಘಾಟನಾ ಸಮಾರಂಭ:ವಿಭಾಗಮಟ್ಟದ ನಾಟಕ ಸ್ಪರ್ಧೆಯ ಉದ್ಘಾಟನೆಯನ್ನು ಡಯಟ್ ಪ್ರಾಚಾರ್ಯ ದೊಡ್ಡಬಸಪ್ಪ ನೀರಲಕೇರಿ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಆಯುಬ್ ಖಾನ್ , ಉಪಾಧ್ಯಕ್ಷೆ ಸೌಭಾಗ್ಯ ನಾಗರಾಜ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರ್ತಂಡರಾವ್ ದೇಸಾಯಿ, ವಿಜಯಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ, ಡಯಟ್ ಹಿರಿಯ ಉಪನ್ಯಾಸಕರಾದ ಎಚ್.ಆರ್. ಪನಮೇಶಲು, ನಿರ್ಮಲಾ ಬಿ., ಮೈತ್ರಾದೇವಿ ರಡ್ಡೇರ, ಪ್ರಾಣೇಶ ಎಂ., ಕೃಷ್ಣಾ, ರೇಖಾ ಜಿ., ಶೇಖಣ್ಣ ಸಿ., ಕಾರ್ಯಕ್ರಮದ ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ, ಡಯಟ್ ಸಿಬ್ಬಂದಿ ಸೇರಿದಂತೆ ಮೊದಲಾದವರು ಇದ್ದರು.