ರಿಪ್ಪನ್‍ಪೇಟೆ ಸುತ್ತಮುತ್ತಲ ಗ್ರಾಮದಲ್ಲಿ ದೀಪಾವಳಿ ನೋನಿ ಹಬ್ಬ

| Published : Oct 31 2024, 12:46 AM IST

ರಿಪ್ಪನ್‍ಪೇಟೆ ಸುತ್ತಮುತ್ತಲ ಗ್ರಾಮದಲ್ಲಿ ದೀಪಾವಳಿ ನೋನಿ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತಮುತ್ತಲಿನ ಊರುಗಳಲ್ಲಿ ಗ್ರಾಮದೇವರುಗಳಿಗೆ ಕುರಿ ಕೋಳಿಗಳ ಬಲಿ ನೀಡುವ ಮೂಲಕ ದೀಪಾವಳಿಯ ನೋನಿ ಆಚರಣೆಯನ್ನು ಶ್ರದ್ದಾ ಭಕ್ತಿಯಿಂದ ನಾಗರೀಕರು ಆಚರಿಸುವುದು ವಿಶೇಷ!

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಸುತ್ತಮುತ್ತಲಿನ ಊರುಗಳಲ್ಲಿ ಗ್ರಾಮದೇವರುಗಳಿಗೆ ಕುರಿ ಕೋಳಿಗಳ ಬಲಿ ನೀಡುವ ಮೂಲಕ ದೀಪಾವಳಿಯ ನೋನಿ ಆಚರಣೆಯನ್ನು ಶ್ರದ್ದಾ ಭಕ್ತಿಯಿಂದ ನಾಗರೀಕರು ಆಚರಿಸುವುದು ವಿಶೇಷ!ರೈತ ಮುಖಂಡ ಮುಡುಬ ಧರ್ಮಪ್ಪ ಮಾತನಾಡಿ, ಮಲೆನಾಡಿನ ವಿಶೇಷ ಹಬ್ಬಗಳಲ್ಲಿ ಒಂದಾದ ದೀಪಾವಳಿಯಲ್ಲಿ ಜನ ಅಗತ್ಯ ಖರೀದಿಯೊಂದಿಗೆ, ಮನೆ ದೈವಗಳಿಗೆ ಹರಿಕೆ ಸಲ್ಲಿಸಿ ಪ್ರಸಕ್ತ ವರ್ಷದಲ್ಲಿ ಬೆಳೆದಿರುವ ಬೆಳೆ ಬೇಸಾಯ, ಮಕ್ಕಳು, ಜಾನುವಾರುಗಳಿಗೆ ಯಾವುದೇ ರೋಗ ರುಜನೆ ಹರಡದಂತೆ ಪ್ರಾರ್ಥಿಸಿ, ದೇವರು ದೈವಗಳಲ್ಲಿ ಮೊರೆಹೋಗಿ ಭಕ್ತಿಯಿಂದ ಪ್ರಾರ್ಥಿಸಿ ಹರಿಕೆ ಒಪ್ಪಿಸುವುದು ನಮ್ಮ ಪುರಾತನಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಹಬ್ಬ ಎಂದು ತಿಳಿಸಿದರು.

ತಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಉಳಿಸಿ ಬೆಳಸಿಕೊಂಡು ಬಂದಿರುವ ಪದ್ಧತಿಗಳನ್ನು ನಮ್ಮ ಮುಂದಿನ ಪೀಳಿಗೆಯವರು ಆಚರಿಸುವಂತಾಗಲಿ ಎಂದು ಹೇಳಿದರು.ರೈತರ ಜಮೀನಿನ ಮತ್ತು ಊರಿನ ಗಡಿಯಂಚಿನಲ್ಲಿರುವ ಗ್ರಾಮದಲ್ಲಿನ ಶೀಲವಂತ ಚೌಡಿ, ಗಾಮನಬನ, ಗವಟೂರಿನ ಚಿಕ್ಕಬೀರಣಕೆರೆ ಬೂತಪ್ಪ, ಮಲ್ಲಾಪುರ ಗ್ರಾಮದ ಮರಬಿನಕುಣಿ ಬೂತಪ್ಪ, ವರನಹೊಂಡ ಬೂತರಾಯ, ರಣ ಯಕ್ಷಿಣಿ ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ ಮಾದಾಪುರ, ಬೆಳಂದೂರು, ಮಸರೂರು, ತಮ್ಮಡಿಕೊಪ್ಪ, ಬಸವಾಪುರ ಹೆದ್ದಾರಿಪುರ, ಕೊಳವಳ್ಳಿ, ಕೋಟೆತಾರಿಗಾ.ಬೆಳ್ಳೂರು, ಹಾಲುಗುಡ್ಡೆ, ಮಾದ್ಲಾರದಿಂಬ, ನೇರಲುಮನೆ, ಕುಕ್ಕಳಲೇ, ಕೆದಲುಗುಡ್ಡೆ ಇನ್ನಿತರ ಗ್ರಾಮಗಳ ದೇವರುಗಳಿಗೆ ನೋನಿ ಸಂದರ್ಭದಲ್ಲಿ ಮನೆಗೆ ಒಬ್ಬರು ಇಬ್ಬರಂತೆ ತೆರಳಿ ಸ್ವಚ್ಚಗೊಳಿಸುತ್ತಾರೆ.

ತಳಿರು ತೋರಣಗಳೊಂದಿಗೆ ಬಾಳೆ ಕಬ್ಬಿನ ಸುಳಿಯನ್ನು ಕಟ್ಟಿ ಚಂಡುಹೂವಿನ ಮಾಲೆಯೊಂದಿಗೆ ಅಲಂಕರಿಸಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ಸಮರ್ಪಿಸಿ ಕೋಳಿ ಕುರಿಗಳೊಂದಿಗೆ ವರಹ(ಹಂದಿ)ಗಳನ್ನು ಬಲಿ ನೀಡುವುದು ಹಬ್ಬದ ಪದ್ದತಿಯಾಗಿದೆ.