ಸಾರಾಂಶ
ಕಡೂರು, ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ಖರೀದಿ ಜೋರಾಗಿದ್ದರೂ ಬೆಲೆ ಏರಿಕೆಯ ಬಿಸಿ ಕೂಡ ಏರಿತ್ತು. ಪಟ್ಟಣದ ಶ್ರೀ ಪೇಟೆ ಗಣಪತಿ- ಆಂಜನೇಯ ಸ್ವಾಮಿ ವೃತ್ತದಲ್ಲಿ ಮಹಿಳೆಯರು ದೀಪಾವಳಿ ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಗಿನಿಂದಲೇ ಪಟ್ಟಣದಲ್ಲಿ ಹಾದು ಹೋಗುವ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮುಗಿಬಿದ್ದಿದ್ದರು
ಕನ್ನಡಪ್ರಭ ವಾರ್ತೆ, ಕಡೂರು
ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ಖರೀದಿ ಜೋರಾಗಿದ್ದರೂ ಬೆಲೆ ಏರಿಕೆಯ ಬಿಸಿ ಕೂಡ ಏರಿತ್ತು.ಪಟ್ಟಣದ ಶ್ರೀ ಪೇಟೆ ಗಣಪತಿ- ಆಂಜನೇಯ ಸ್ವಾಮಿ ವೃತ್ತದಲ್ಲಿ ಮಹಿಳೆಯರು ದೀಪಾವಳಿ ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಗಿನಿಂದಲೇ ಪಟ್ಟಣದಲ್ಲಿ ಹಾದು ಹೋಗುವ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮುಗಿಬಿದ್ದಿದ್ದರು. ಹಬ್ಬದ ಸಾಮಾನುಗಳು ಭರ್ಜರಿ ಖರೀದಿ ನಡೆಯಿತು. ರಾಷ್ಟ್ರೀಯ ಹೆದ್ದಾರಿಯ 2 ಬದಿಗಳಲ್ಲಿ ಸೇವಂತಿಗೆ ಹೂವಿನ ಮಾರಾಟ ಜೋರಾಗಿ 1 ಮಾರಿಗೆ ನೂರು ರೂ ತನಕ ಇತ್ತು. ಗ್ರಾಮೀಣ ಪ್ರದೇಶದಿಂದ ಹೂವಿನ ಮಾರಾಟಕ್ಕೆ ಬಂದ ರೈತರು ಸ್ವತಃ ಕೆಲವರು ಮಾರಾಟ ಮಾಡಿದರೆ ಮತ್ತೆ ಕೆಲವರು ವ್ಯಾಪಾರಸ್ಥರಿಗೆ ಮಾರಿ ತೆರಳಿದರು. ತರಕಾರಿ ಖರೀದಿಯಲ್ಲೂ 1 ಕೆಜಿ ಬೀನ್ಸ್ ಗೆ 80 ರು.ನಿಂದ ಆರಂಭವಾಗಿ ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಾಗಿರುವುದು ಕಂಡು ಬಂದಿತು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಪೆಂಡಾಲಿನ ಮೈದಾನದಲ್ಲಿ ಪಟಾಕಿ ಮಾರಾಟ ನಡೆಯಿತು. ಅನೇಕ ಅಂಗಡಿಗಳಲ್ಲಿ ಮಳೆ ಬರುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ವ್ಯಾಪಾರ ಕಡಿಮೆಯಾಗಿತ್ತು. ಪಟಾಕಿ ಅಂಗಡಿಗಳ ಮಾಲೀಕ ದ್ವಾರಕನಾಥ ಬಾಬು ಮತ್ತು ಸಪ್ತಕೋಟಿ ಧನಂಜಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸರಕಾರದ ನಿಯಮಾವಳಿ ಅನುಸರಿಸಿ ಪರಿಸರ ಸ್ನೇಹಿ ಅಂಗಡಿಗಳನ್ನು ತೆರೆದಿದ್ದೇವೆ. ಮಳೆ ಬರುತ್ತಿರುವ ಕಾರಣ ಖರೀದಿಗೆ ಬರುವ ಗ್ರಾಹಕರು ಕಡಿಮೆಯಾಗಿದ್ದಾರೆ. ಮಳೆ ಯಿಂದ ವ್ಯಾಪಾರಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.31ಕೆಕೆಡಿಯು1.
ಕಡೂರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಪೆಂಡಾಲಿನ ಮೈದಾನದಲ್ಲಿ ತೆರೆದಿರುವ ಪಟಾಕಿ ಅಂಗಡಿಗಳಲ್ಲಿ ಮಾರಾಟ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))