ಕೊಲ್ಲೂರಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್

| Published : Mar 27 2024, 01:00 AM IST

ಸಾರಾಂಶ

ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕೊಲ್ಲೂರು ಶ್ರೀ ಮೂಕಾಂಬಿಕಾ‌ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಶ್ರೀ ದೇವಿಯ ದರ್ಶನ ಪಡೆದು, ಋತ್ವಿಜರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಂದ ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಪೂರ್ಣ ಕುಂಭದೊಂದಿಗೆ ಬರ ಮಾಡಿಕೊಳ್ಳಲಾಯಿತು. ಕಂಬದ ಗಣಪತಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ಸ್ವಯಂಭು ಹಾಗೂ ಶ್ರೀ‌ ಮೂಕಾಂಬಿಕೆ ದೇವಿಯ ದರ್ಶನ ಪಡೆದುಕೊಂಡ‌ ಬಳಿಕ ವೀರಭದ್ರ ಸ್ವಾಮಿಯ ದರ್ಶನ ಮಾಡಿದರು. ಕ್ಷೇತ್ರದ ಹಿರಿಯ ಋತ್ವಿಜರಾದ ಎನ್. ನರಸಿಂಹ‌ ಅಡಿಗ ಹಾಗೂ ಶ್ರೀಧರ ಅಡಿಗ ಅವರು ಡಿಕೆಶಿ ಅವರನ್ನು ಗೌರವಿಸಿದರು.

ಬೈಂದೂರಿನ ಮಾಜಿ‌ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ. ಎಂ. ಸುಕುಮಾರ ಶೆಟ್ಟಿ, ಉದ್ಯಮಿ ಯು. ಬಿ. ಶೆಟ್ಟಿ, ಆಪ್ತ ಕಾರ್ಯದರ್ಶಿ ಶ್ರೀಧರ್, ಪ್ರಮುಖರಾದ ಮಿಥುನ್ ರೈ ಮಂಗಳೂರು, ಎಮ್. ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್‌ ಉಡುಪಿ, ಇನಾಯತ್ ಆಲಿ ಸುರತ್ಕಲ್, ಕಿಶನ್‌ ಹೆಗ್ಡೆ‌ ಕೊಳ್ಕೆಬೈಲ್, ದಿನೇಶ್‌ ಪುತ್ರನ್ ಉಡುಪಿ, ಮುರುಳೀಧರ ಶೆಟ್ಟಿ ಉಡುಪಿ, ರಾಜು ಎಸ್. ಪೂಜಾರಿ ಬೈಂದೂರು, ಶಂಕರ ಪೂಜಾರಿ ಯಡ್ತರೆ, ಬಾಬು ಶೆಟ್ಟಿ ತೆಗ್ಗರ್ಸೆ, ರಮೇಶ್ ಗಾಣಿಗ ಕೊಲ್ಲೂರು, ಅರವಿಂದ‌ ಪೂಜಾರಿ ಪಡುಕೋಣೆ, ಹರೀಶ್ ತೋಳಾರ್ ಕೊಲ್ಲೂರು, ಕುಂದಾಪುರ ಬ್ಲಾಕ್‌ ಎನ್ಎಸ್ಯುಐ ಅಧ್ಯಕ್ಷ ಸುಜನ್‌ ಶೆಟ್ಟಿ ಮುಂತಾದವರು ಇದ್ದರು.