ಹೊಸಕೋಟೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಗಳು ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿಗೆ ಹರಕೆ ಕಟ್ಟಿಕೊಂಡು ಬಾಳೆಹಣ್ಣಿನ ಮೇಲೆ ಡಿ.ಕೆ.ಶಿವಕುಮಾರ್ ಹೆಸರು ಬರೆದು ತೇರಿಗೆ ಸಮರ್ಪಿಸಿದರು. ತಾವರೆಕೆರೆ ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಪ್ರಭಾಕರ್, ಯೇಸು ಸೇರಿದಂತೆ ಹಲವಾರು ಡಿಕೆಶಿ ಅಭಿಮಾನಿಗಳು ಬಾಳೆಹಣ್ಣಿನ ಮೇಲೆ “ಮುಂದಿನ ಸಿಎಂ ಡಿಕೆಶಿ” ಎಂದು ಬರೆದು ತೇರಿಗೆ ಎಸೆಯುವ ಮೂಲಕ ಹರಕೆ ಕಟ್ಟಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿಕೆ.ಶಿವಕುಮಾರ್ ಪಕ್ಷ ಸಂಘಟನೆ ಕಾರಣವಾಗಿದ್ದು ಅವರ ಶ್ರಮಕ್ಕೆ ಪ್ರತಿಫಲವಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಮಾಡಬೇಕು. ಡಿಕೆ.ಶಿವಕುಮಾರ್ ಅವರು ಕೂಡ ಸಿಎಂ ಆಗಲು ಅರ್ಹರಾಗಿದ್ದು ಮುಂದಿನ 15 ದಿನದ ಒಳಗಾಗಿ ಅವರಿಗೆ ಶ್ರೀ ಅವಿಮುಕ್ತೇಶ್ವರನ ಆಶೀರ್ವಾದ ಲಭಿಸಿ ಸಿಎಂ ಆಗಲಿ ಎಂದು ಬಾಳೆ ಹಣ್ಣನ್ನು ಎಸೆದು ಹರಕೆ ಮಾಡಿದ್ದೇವೆ ಎಂದು ತಾವರೆಕೆರೆ ಗ್ರಾಪಂ ಮಾಜಿ ಅದ್ಯಕ್ಷ ರವಿಕುಮಾರ್ ತಿಳಿಸಿದರು.
ಡಿಕೆಶಿ ಸಿಎಂ ಆಗಬೇಕೆಂದು ಅವಿಮುಕ್ತೇಶ್ವರನಿಗೆ ಹರಕೆ
ಹೊಸಕೋಟೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಗಳು ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿಗೆ ಹರಕೆ ಕಟ್ಟಿಕೊಂಡು ಬಾಳೆಹಣ್ಣಿನ ಮೇಲೆ ಡಿ.ಕೆ.ಶಿವಕುಮಾರ್ ಹೆಸರು ಬರೆದು ತೇರಿಗೆ ಸಮರ್ಪಿಸಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.