ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡಿ

| Published : Mar 23 2024, 01:03 AM IST

ಸಾರಾಂಶ

ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಜಾರಿಯಾದ ಹಿನ್ನೆಲೆ ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಚೆಕ್ಪೋಸ್ಟ್ಗಳನ್ನು ಅಗತ್ಯ ಸಿಬ್ಬಂದಿ ನಿಯೋಜನೆಯೊಂದಿಗೆ ನಿರ್ಮಿಸಲಾಗಿದ್ದು, ಮಿಣಜಗಿ ಕ್ರಾಸ್ನ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಟಿ.ಬೂಬಾಲನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಶುಕ್ರವಾರ ಭೇಟಿ ನೀಡಿ ತಪಾಸಣೆ ನಡೆಸಿದರಲ್ಲದೇ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳು ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಜಾರಿಯಾದ ಹಿನ್ನೆಲೆ ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಅಗತ್ಯ ಸಿಬ್ಬಂದಿ ನಿಯೋಜನೆಯೊಂದಿಗೆ ನಿರ್ಮಿಸಲಾಗಿದ್ದು, ಮಿಣಜಗಿ ಕ್ರಾಸ್‌ನ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಟಿ.ಬೂಬಾಲನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಶುಕ್ರವಾರ ಭೇಟಿ ನೀಡಿ ತಪಾಸಣೆ ನಡೆಸಿದರಲ್ಲದೇ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳು ನೀಡಿದರು.

ಈ ವೇಳೆ ಡಿಸಿ ಟಿ.ಬೂಬಾಲನ್ ಅವರು ಉಪಸ್ಥಿತರಿದ್ದ ಸಿಪಿಐ ಮತ್ತು ಚೆಕ್‌ಪೋಸ್ಟ್‌ ತಪಾಸಣಾ ಅಧಿಕಾರಿ ಪಿಡಿಒ ಬಿ.ಎಂ.ಸಾಗರ ಅವರಿಗೆ ಚೆಕ್‌ಪೋಸ್ಟ್‌ನ ಮೂಲಕ ತೆರಳುವ ಪ್ರತಿವಾಹನಗಳನ್ನು ತಪಾಸಣೆ ನಡೆಸಬೇಕು. ಯಾವುದೇ ವಾಹನಗಳನ್ನು ಹಾಗೆ ಬಿಡುವಂತಿಲ್ಲ. ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್ಲಿಯೂ ಲೋಪಬಾರದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರಲ್ಲದೇ ಅಕ್ರಮ ಹಣ ಸಾಗಾಟ ಮತ್ತು ಮದ್ಯ ಸಾಗಾಟ ಕಂಡು ಬಂದರೆ ಅವುಗಳನ್ನು ಸೀಜ್ ಮಾಡುವುದರೊಂದಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಲೋಕಸಭಾ ಚುನಾವಣೆಯು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕಿದೆ. ಇದಕ್ಕೆ ಎಲ್ಲ ರೀತಿಯಿಂದಲೂ ಅಧಿಕಾರಿಗಳು ಮುಂದಾಗಿ ರಾಜ್ಯ ಹೆದ್ದಾರಿ ಇರುವುದರಿಂದ ಚೆಕ್‌ಪೋಸ್ಟ್‌ ಮೂಲಕ ಊರಿನ ಒಳಗಡೆ ಮತ್ತು ಹೊರಗಡೆ ಹೋಗುವ ಪ್ರತಿವಾಹನವನ್ನು ತಪಾಸಣೆ ನಡೆಸಬೇಕು. ಎಲ್ಲಿಯೂ ಲೋಪವಾಗದಂತೆ ನಡೆದುಕೊಳ್ಳಿ ಎಂದು ಸೂಚಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಅವರು ಮಾತನಾಡಿ, ಈಗಾಗಲೇ ಪೊಲೀಸ್ ಸಿಬ್ಬಂದಿಗಳಿಗೆ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೨ ಗಂಟೆವರೆಗೆ ೨ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ರಾತ್ರಿ ೮ ಗಂಟೆಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಸಿಫ್ಟ್‌ವೈಸ್‌ ಸೂಚಿಸಿದಂತೆ ಕಾರ್ಯನಿರ್ವಹಿಸಲು ಸೂಚಿಸಿದರಲ್ಲದೇ ಕರ್ತವ್ಯನಿರತ ಸೆಕ್ಟರ್ ಆಫೀಸರ್ ಜೊತೆಗೆ ಸದಾಕಾಲ ಇರಬೇಕು. ಯಾವುದೇ ಸಂದರ್ಭದಲ್ಲಿಯೂ ಕರ್ತವ್ಯ ನಿರತ ಸಿಬ್ಬಂದಿಗಳು ಚೆಕ್‌ಪೋಸ್ಟ್‌ದಿಂದ ಮುನ್ಸೂಚನೆ ಇಲ್ಲದೇ ಹೋಗುವಂತಿಲ್ಲ. ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮತ್ತು ದಾಖಲೆ ಇಲ್ಲದ ಹಣ, ಚಿನ್ನ ಮತ್ತು ಅಕ್ರಮ ಮದ್ಯ ಸಾಗಾಟ ಯಾವುದೇ ಕಂಡುಬಂದರೂ ವಶಕ್ಕೆ ಪಡೆದುಕೊಳ್ಳಿ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಮಹ್ಮದತೋಸಿಫ್ ಘೋರಿ ಅವರಿಗೆ ಸೂಚಿಸಿದರು.ಈ ಸಮಯದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ತಪಾಸಣಾ ಅಧಿಕಾರಿ ಬಿ.ಎಂ.ಸಾಗರ, ಪಿಎಸ್‌ಐ ಮಹ್ಮದತೋಸಿಫ್ ಘೋರಿ, ಪೊಲೀಸ್ ಸಿಬ್ಬಂದಿಗಳಾದ ಈರಣ್ಣ ಕುಂಬಾರ, ಸಂಗಮೇಶ ಚಲವಾದಿ, ಭೀಮು ಲಮಾಣೆ ಮೊದಲಾದವರು ಇದ್ದರು.

---

೨೨ಟಿಎಲ್‌ಕೆ ೨