ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಮಾಡಿ

| Published : Dec 16 2024, 12:47 AM IST

ಸಾರಾಂಶ

ಸೂಲಿಬೆಲೆ: ರೈತರು ರೇಷ್ಮೆ, ಹೈನುಗಾರಿಕೆ ಉಪ ಕಸುಬುಗಳಾಗಿ ಅಳವಡಿಸಿಕೊಂಡರೆ ಆರ್ಥಿಕ ಸುಧಾರಣೆ ಕಂಡುಕೊಳ್ಳಬಹುದು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಸೂಲಿಬೆಲೆ: ರೈತರು ರೇಷ್ಮೆ, ಹೈನುಗಾರಿಕೆ ಉಪ ಕಸುಬುಗಳಾಗಿ ಅಳವಡಿಸಿಕೊಂಡರೆ ಆರ್ಥಿಕ ಸುಧಾರಣೆ ಕಂಡುಕೊಳ್ಳಬಹುದು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಹೋಬಳಿಯ ತಿಮ್ಮಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ಮಿಸಿರುವ ಅಂಗಡಿ ಮಳಿಗೆ ಹಾಗೂ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂದಿನಿ ಉತ್ಪನ್ನಗಳ ಉದ್ಯಮ ದೇಶವ್ಯಾಪಿ ವಿಸ್ತರಿಸಿಕೊಂಡಿದೆ. ಸರ್ಕಾರ ಹಾಲಿನ ದರ ಹೆಚ್ಚಿಸಬೇಕು ಎಂದು ಹೇಳಿದರು.

ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಹೈನುಗಾರಿಕೆ ರೈತರ ಜೀವನಾಧಾರ. ಹಿಂಡಿ, ಬೂಸಾ, ಫೀಡ್ ದರ ಹೆಚ್ಚಳವಾಗಿದ್ದು ಇದನ್ನು ಬಮೂಲ್‌ ಪರಿಶೀಲಿಸಿ ಹಾಲಿನ ದರ ಹೆಚ್ಚಿಸಬೇಕು ಎಂದರು.

ಬಮೂಲ್‌ ಉಪಾಧ್ಯಕ್ಷ ಕೆ.ಎಂ.ಮಂಜುನಾಥ್ ಮಾತನಾಡಿ, ಹಾಲಿಗೆ ೫ ರು. ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಮುಖ್ಯಮಂತ್ರಿಗಳು ಅನುಮೋದನೆ ನೀಡಿದರೆ ಹಾಲಿನ ದರ ಹೆಚ್ಚಿಸಲು ಬಮೂಲ್‌ ಸಿದ್ದವಿದೆ ಎಂದರು.

ಇದೇ ಸಂದರ್ಭದಲ್ಲಿ ಹೆಚ್ಚಿನ ಹಾಲು ಸರಬರಾಜು ಮಾಡಿದ ಇಬ್ಬರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು,

ಹೊಸಕೋಟೆ ಡೇರಿ ಶಿಬಿರದ ಉಪವ್ಯವಸ್ಥಾಪಕ ಡಾ.ಶಿವಾಜಿನಾಯಕ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಎಸ್‌ಎಪ್‌ಸಿಎಸ್ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ಬೆಮೂಲ್ ನಿರ್ದೇಶಕ ಮಂಜುನಾಥ್, ನಗರೇನಹಳ್ಳಿ ನಾಗರಾಜಪ್ಪ, ಮುತ್ಸಂದ್ರ ಆನಂದಪ್ಪ, ಡೇರಿ ಅಧ್ಯಕ್ಷ ಸುರೇಶ್, ಸಿಇಒ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಕಸಾಪ ಅಧ್ಯಕ್ಷ ಎಚ್.ಎಂ.ಮುನಿರಾಜು, ಹೊಸಹಳ್ಳಿ ಜಯರಾಮ್, ವಿಜಯಕುಮಾರ್, ಸಹಾಯಕ ವ್ಯವಸ್ಥಾಪಕ ಸಂತೋಷ್, ವಿಸ್ತರಣಾಧಿಕಾರಿ ಪವಿತ್ರ,ಸೌಮ್ಯ, ರಘು,ಆನಂದ್, ಡೇರಿ ನಿರ್ದೇಶಕರಾದ ನಾರಾಯಣಸ್ವಾಮಿ, ಅಶ್ವತಪ್ಪ, ನಾಗೇಶ್, ಮುನಿರಾಜು, ನಾರಾಯಣಸ್ವಾಮಿ, ಮುನಿಯಪ್ಪ, ಆಂಜಿನಮ್ಮ ಇತರರಿದ್ದರು.

ಚಿತ್ರ; ೧೩ ಸೂಲಿಬೆಲೆ ೦೧ ಜೆಪಿಜೆ ನಲ್ಲಿದೆ