ಸಾರಾಂಶ
ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ನೂತನ ಗ್ರಾಪಂ ಕಟ್ಟಡವನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಿಬ್ಬಂದಿಗೆ ಶಾಸಕಿ ಎಂ.ಪಿ. ಲತಾ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕೆಲಸ, ಕಾರ್ಯಗಳಿಗೆ ಗ್ರಾಮ ಪಂಚಾಯ್ತಿಗಳಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸದೇ ತ್ವರಿತವಾಗಿ ಕೆಲಸ ಮಾಡಿಕೊಡಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ತಾಕೀತು ಮಾಡಿದರು.ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ 2022-23ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ನೂತನ ಭಾರತ್ ನಿರ್ಮಾಣ ಸೇವಾ ಕೇಂದ್ರ(ಗ್ರಾಪಂ) ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ನರೇಗಾ ಯೋಜನೆಯಡಿ ₹35.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಾಪಂ ಕಟ್ಟಡವನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತಿಪ್ಪಿಗುಂಡಿ ಹೊನ್ನಮ್ಮ ಕರಿಯಪ್ಪ, ಉಪಾಧ್ಯಕ್ಷೆ ದುರುಗಮ್ಮ ಭೋವಿ ಹನುಮಂತಪ್ಪ, ಸದಸ್ಯರಾದ ಕಟ್ಟಾಣಿ ಪುಷ್ಪಾವತಿ ರಾಜಪ್ಪ, ಎಂ. ನಾಗೇಂದ್ರಪ್ಪ, ದಾಸರ ದ್ಯಾಮಪ್ಪ, ಆಶಾ ಕರಿಬಸಪ್ಪ, ಅರಸನಾಳು ನಿಂಗಪ್ಪ, ಬಿ. ಸುಗಂಧಮ್ಮ ರೇವಣಸಿದ್ದಪ್ಪ, ಕೆ.ಬಿ. ಯಲ್ಲಪ್ಪ, ನೇತ್ರಾವತಿ ವಿರೂಪಾಕ್ಷಪ್ಪ, ಹರಪನಹಳ್ಳಿ ಚೌಡಮ್ಮ ನಾಗಪ್ಪ, ನೀಲಮ್ಮ ಕಮ್ಮತ್ ನಿಂಗಪ್ಪ, ಡೊಂಬಳ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಾಪಂ ಇಒ ಚಂದ್ರಶೇಖರ್ ವೈ.ಎಚ್., ಎಇಇ ನಾಗಪ್ಪ, ತಾಪಂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ, ಪಿಡಿಒ ಕೆ.ಆನಂದನಾಯ್ಕ್, ತಾಂತ್ರಿಕ ಸಹಾಯಕ ಅಭಿಯಂತರ ಮಲ್ಲೇಶ ನಾಯ್ಕ್, ನಾಗರಾಜ್ ನಾಯ್ಕ್, ಹೊಸಗೆರಪ್ಪ ಸೇರಿದಂತೆ ಗ್ರಾಪಂ ಸಿಬ್ಬಂದಿ, ಮುಖಂಡರು, ಗ್ರಾಮಸ್ಥರು ಇದ್ದರು.