ವೃದ್ಧಾಪ್ಯದಲ್ಲಿ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ

| Published : Feb 17 2025, 12:32 AM IST

ವೃದ್ಧಾಪ್ಯದಲ್ಲಿ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಣಾಂತರಗಳಿಂದ ವೃದ್ದಾಪ್ಯದಲ್ಲಿರುವವರನ್ನು ಅವರ ಕುಟುಂಬದ ಸದಸ್ಯರು ಪೋಷಿಸಲು ನಿರಾಕರಿಸಿದ ಸಂದರ್ಭಗಳಲ್ಲಿ ವೃದ್ಧಾಶ್ರಮಗಳು ಅವರಿಗೆ ಆಸರೆ ನೀಡಿ, ನೆಮ್ಮದಿಯ ಜೀವನ ನೀಡುತ್ತಿದ್ದಾರೆ. ಮಕ್ಕಳು ವೃದ್ಧ ತಂದೆ-ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸದೆ ಮನೆಯಲ್ಲೇ ಅವರ ಸೇವೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರವೃದ್ಧಾಪ್ಯದಲ್ಲಿ ತಂದೆತಾಯಿ ಹಾಗೂ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ ಅವರ ಮಾರ್ಗದರ್ಶನದಿಂದ ವಂಚಿತರಾಗದಿರಿ ವೃದ್ಧರನ್ನು ಮನೆಯಲ್ಲಿಟ್ಟು ಪೋಷಿಸುವ ಮನೋಭಾವ ಮಕ್ಕಳು ಬೆಳೆಸಿಕೊಳ್ಳಬೇಕೆಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.ತಾಲೂಕಿನ ನೆರ್ನಹಳ್ಳಿಯಲ್ಲಿ ದಕಿಂಗ್‌ಡಂ ಎಜುಕೇಷನ್ ಟ್ರಸ್ಟ್‌ನಿಂದ ನೂತನವಾಗಿ ೨.೨೫ ಕೋಟಿ ವೆಚ್ಛದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ಸತ್ಯಸಾಯಿ ಬಾಬಾ ಗುರುಕುಲ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ವದ್ಧಾಶ್ರಮವೇ ನೆಮ್ಮದಿ ಕೇಂದ್ರ

ಕಾರಣಾಂತರಗಳಿಂದ ವೃದ್ದಾಪ್ಯದಲ್ಲಿರುವವರನ್ನು ಅವರ ಕುಟುಂಬದ ಸದಸ್ಯರು ಪೋಷಿಸಲು ನಿರಾಕರಿಸಿದ ಸಂದರ್ಭಗಳಲ್ಲಿ ವೃದ್ಧಾಶ್ರಮಗಳು ಅವರಿಗೆ ಆಸರೆ ನೀಡಿ, ನೆಮ್ಮದಿಯ ಜೀವನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಶ್ರೀಸತ್ಯಸಾಯಿ ವೃದ್ಧಾಶ್ರಮ ಮತ್ತು ಯೋಗ ಧ್ಯಾನ ಮಂದಿರ ಸಂಸ್ಥಾಪಕ ಸುರೇಶ್‌ಕುಮಾರ್ ಮಾತನಾಡಿ, ತಾವು ತಮ್ಮ ಕುಟುಂಬ ಸುಖವಾಗಿ ಜೀವನ ಸಾಗಿಸುವಷ್ಟು ಅನುಕೂಲ ತಮಗಿದ್ದರೂ, ಶ್ರೀ ನಿರ್ಭಯಾನಂದ ಸ್ವಾಮೀಜಿಯವರ ಮಾತುಗಳಿಂದ ಪ್ರೇರಣೆಹೊಂದಿ ಸಮಾಜ ಸೇವೆಗೆ ಇಳಿದಿದ್ದು, ಈ ಸಂಸ್ಥೆ ಆರಂಭಿಸಲಾಗಿದೆ ಎಂದರು.

ಇದೀಗ ವೃದ್ಧಾಶ್ರಮದಲ್ಲಿ ೪೫ ಕ್ಕೂ ಹೆಚ್ಚು ಮಂದಿ ವೃದ್ಧರಿದ್ದಾರೆ, ೧೦ ಮಂದಿ ಮದ್ಯವ್ಯಸನ ತ್ಯಜಿಸುವವರಿದ್ದಾರೆ, ಇವರ ಪಾಲನೆಗೆ ಅಯೋಧ್ಯೆಯಿಂದ ಆಗಮಿಸಿರುವ ವೈದ್ಯ ವಿನೋದ್ ಕುಮಾರ್ ಮೌರ್ಯ ಸಂಸ್ಥೆಯಲ್ಲಿಯೇ ವಾಸ್ತವ್ಯ ಇದ್ದು ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ, ಅನಾಥ ಮಕ್ಕಳಿಗೆ ಅದರಲ್ಲೂ ಕೊರೊನಾ ಕಾಲಘಟ್ಟದಲ್ಲಿ ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಗುರುಕುಲ ಆರಂಭಿಸುತ್ತಿದ್ದು ಮುಂದಿನ ವರ್ಷ ಇದು ಆರಂಭವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್, ಸಮೃದ್ಧಿ ಸುಧಾಕರ್, ರಾಮಾಂಜಿನಪ್ಪ, ನಾರಾಯಣಸ್ವಾಮಿ ಇದ್ದರು.