ಸಾರಾಂಶ
ಅನೇಕ ಶಾಲೆಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇವೆ. ತಾಂತ್ರಿಕ ಸಮಸ್ಯೆಗಳು ಸೇರಿಕೊಂಡಿವೆ. ಚರ್ಚೆಯ ಮೂಲಕವು ಬಗೆಹರಿಸಿಕೊಳ್ಳಬಹುದಾಗಿದೆ. ಶಿಕ್ಷಕರ ಕೊರತೆ ಇದೆ ಹೀಗೆ ಒಟ್ಟಾರೆ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ನಾನು ಆಯ್ಕೆಯಾದರೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.ಈಗಾಗಲೇ ನಾನು ಕಳೆದ 12 ವರ್ಷಗಳಿಂದ ನೈಋತ್ಯ ಕ್ಷೇತ್ರಕ್ಕೆ ಸಂಬಂಧಿಸಿದ 6 ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿದ್ದೇನೆ, ಮತದಾರರನ್ನು ತಲುಪಿದ್ದೇನೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಸ್ಪರ್ಧಿಸಬೇಕು. ಶಿಕ್ಷಕ ಮತದಾರರು ಶಿಕ್ಷಕರಲ್ಲದವರ ಆಯ್ಕೆ ಮಾಡಬಾರದು ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ.ಅರುಣ್ ಹೊಸಕೊಪ್ಪ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಶಿಕ್ಷಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ. ಈ ಹಿಂದೆ 2012 ಮತ್ತು 2018ರಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ, ಗಮನಾರ್ಹ ಮತಗಳ ಪಡೆದುಕೊಂಡಿದ್ದೆ ಎಂದರು.
ನಾನು ಶಿಕ್ಷಕನಾಗಿರುವುದರಿಂದ ಸಹಜವಾಗಿಯೇ ಶಿಕ್ಷಕರ ಸಮಸ್ಯೆಗಳು ಏನು ಎಂಬುದು ಅರಿತುಕೊಂಡಿರುವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ನಾನು ಆಯ್ಕೆಯಾದರೆ ಇದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.ಅನೇಕ ಶಾಲೆಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇವೆ. ತಾಂತ್ರಿಕ ಸಮಸ್ಯೆಗಳು ಸೇರಿಕೊಂಡಿವೆ. ಚರ್ಚೆಯ ಮೂಲಕವು ಬಗೆಹರಿಸಿಕೊಳ್ಳಬಹುದಾಗಿದೆ. ಶಿಕ್ಷಕರ ಕೊರತೆ ಇದೆ ಹೀಗೆ ಒಟ್ಟಾರೆ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ನಾನು ಆಯ್ಕೆಯಾದರೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಈಗಾಗಲೇ ನಾನು ಕಳೆದ 12 ವರ್ಷಗಳಿಂದ ನೈಋತ್ಯ ಕ್ಷೇತ್ರಕ್ಕೆ ಸಂಬಂಧಿಸಿದ 6 ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿದ್ದೇನೆ, ಮತದಾರರನ್ನು ತಲುಪಿದ್ದೇನೆ. ಶಿಕ್ಷಕರಲ್ಲದವರೇ ಈ ಕ್ಷೇತ್ರಕ್ಕೆ ಆಯ್ಕೆಯಾಗುತ್ತ ಬಂದಿದ್ದಾರೆ, ಇದು ತಪ್ಪಾಬೇಕು ಈ ಬಾರಿ ಶಿಕ್ಷಕರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.ಅನುದಾನಿತ ಶಿಕ್ಷಕರ ಸಮಸ್ಯೆಗಳು ಹೆಚ್ಚಾಗಿವೆ. ಅವರು ನಿವೃತ್ತಿ ಹೊಂದಿದಾಗ ಯಾವುದೇ ಪಿಂಚಣಿಯೂ ಇರುವುದಿಲ್ಲ ಮತ್ತು ಅವರಿಗೆ ಯಾವುದೇ ಹಣ ಕೂಡ ಬರುವುದಿಲ್ಲ. ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತದೆ. ಹಾಗಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
ಡಾ.ಅರುಣ್ ಹೊಸಕೊಪ್ಪ, ನೈಋತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ