ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡದುಡ್ಡಿಗಾಗಿ ಔಷಧ ಮಾಡುವುದಲ್ಲ. ಜನರ ಆರೋಗ್ಯ ಕಾಪಾಡುವುದಕ್ಕೆ ಮೊದಲು ಪ್ರಾಮುಖ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಅಮರೇಶ್ವರ ಶ್ರೀಗಳು ನಡೆದು ಬಂದಿದ್ದರು. ತಾವು ನೀಡಿದ ಔಷಧದಿಂದ ವ್ಯಕ್ತಿ ಗುಣಮುಖನಾದರೆ ಮಾತ್ರ ಅದಕ್ಕೆ ಸಿದ್ಧಪಡಿಸಲು ಖರ್ಚಾದ ಹಣವನ್ನಷ್ಟೇ ರೋಗಿಗಳಿಂದ ಪಡೆಯುತ್ತಿದ್ದರು. ಪರೋಪಕಾರದ ಗುಣ ಬೆಳೆಸಿಕೊಂಡಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು. ಮಂಗಳವಾರ ಸಮೀಪದ ಕೋಟೆಕಲ್ ಗ್ರಾಮದ ಶ್ರೀ ಅಮರೇಶ್ವರ ಮಠದ ಅಮರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಮಹೋತ್ಸವ ಹಾಗೂ ಅಮರ ಆದರ್ಶ ದಂಪತಿಗಳಿಗೆ ಸತ್ಕಾರ, ಅಮರ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಜನಜಾಗೃತಿ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಹಣ ಗಳಿಕೆಗೆ ಮಹತ್ವ ನೀಡದೇ ಪರೋಪಕಾರ ಗುಣವನ್ನೂ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಅಧ್ಯಾತ್ಮದ ಅರಿವು ಬೆಳೆಸಿಕೊಳ್ಳಬೇಕು. ಅಧ್ಯಾತ್ಮ ಮನುಷ್ಯನಲ್ಲಿ ಜ್ಞಾನ ಬೆಳೆಸುವುದರ ಜೊತೆಗೆ ತನ್ನನ್ನು ತಾನು ಏನು ಎಂಬುದನ್ನು ತಿಳಿಸಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಜಗತ್ತಿನಲ್ಲಿ ಗುರು ಶಿಷ್ಯರ ಸಂಬಂಧ ಎಲ್ಲ ಸಂಬಂಧಗಳಿಗಿಂತ ಶ್ರೇಷ್ಠವಾದುದು, ಸರಿಯಾದ ಅನುಗ್ರಹ, ಮಾರ್ಗದರ್ಶನ ಮಾಡುವ ಗುರುಸಿಗುವುದು ಬಹಳ ಕಷ್ಟ. ಯಾರು ಇನ್ನೊಬ್ಬರ ಹಣ ತೆಗೆದುಕೊಳ್ಳುವದಿಲ್ಲವೋ ಅವರೇ ನಿಜವಾದ ಶುಚಿಗಳು. ಪರೋಪಕಾರ ಮಾಡುವುದು ಶ್ರೇಷ್ಠ ಕೆಲಸಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರು ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಅಮರೇಶ್ವರ ಶ್ರೀಗಳು ಕಷ್ಟ ಎಂದು ಹೇಳಿಕೊಂಡು ಬರುವ ಜನರ ಸಮಸ್ಯೆ ಬಗೆಹರಿಸುತ್ತಿದ್ದರು, ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದರು. ಉಭಯ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಶ್ರೀಗಳು ಮಾತನಾಡಿ, ಅಮರೇಶ್ವರ ಶ್ರೀಗಳು ಉಭಯ ವೈದ್ಯರಾಗಿದ್ದರು. ಅಪಾರ ಪಾಂಡಿತ್ಯ ಹೊಂದಿದ್ದರು. ಅವರ ಹಾದಿಯಲ್ಲಿಯೇ ಸದ್ಯದ ಶ್ರೀಗಳು ನಡೆಯುತ್ತಿದ್ದು, ಶ್ರೀಮಠವು ಧರ್ಮ ಕಾರ್ಯಗಳನ್ನು ಮಾಡುತ್ತ ಸಾಗುತ್ತಿದೆ ಎಂದು ಹೇಳಿದರು. ಕೊಟ್ಟೂರಿನ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು, ಡಾ.ಮಹಾಂತಲೀಂಗ ಶಿವಾಚಾರ್ಯ ಶ್ರೀಗಳು, ಕೆಲೂರಿನ ಡಾ.ಮಲಯ ಶಾಂತಮುನಿ ಶ್ರೀಗಳು, ಕೋಟೆಕಲ್ ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಶ್ರೀಗಳು, ಅಭಿನವ ಪಂಚಾಕ್ಷರಿ ಶ್ರೀಗಳು, ಶಿವಾನಂದ ದೇವರು, ಟೀಕಿನಮಠದ ದೇವರು, ಅಯ್ಯಪ್ಪಯ್ಯಸ್ವಾಮಿಗಳು ಸಮ್ಮುಖ ವಹಿಸಿದ್ದರು.ಈ ಸಂದರ್ಭದಲ್ಲಿ ನಾಗೇಶ ಮೊರಬದ, ಪ್ರಭು ಮೊರಬದ, ಮಾಗುಂಡಪ್ಪ ಸುಂಕದ, ಮಾಗುಂಡಪ್ಪ ಕಮತರ, ಶಿವು ವಾಲಿಕಾರ, ಕಾಶಿನಾಥ ಪುರಾಣಿಕಮಠ, ಬಸವರಾಜ ಚಿಲ್ಲಾಪುರ, ಶಿವಯೋಗಿ ಹೊದ್ಲೂರಮಠ, ಹುಚ್ಚೇಶ ಕಮತರ, ಮುತ್ತು ಮೊರಬದ, ಮೂಲಿಮನಿ, ವಿರೇಶ ಪುರಾಣಿಕಮಠ, ಡಿ.ವಿ. ಹಿರೇಮಠ, ವಿ.ಎಸ್. ಹಿರೇಮಠ, ಗುಂಡಪ್ಪ ಕೋಟಿ ಸೇರಿದಂತೆ ಇತರರು ಇದ್ದರು.