ಸಾರಾಂಶ
Doc Adalat program on August 30
ಯಾದಗಿರಿ: ಅಂಚೆ ದೂರುಗಳ ಕುರಿತು “ಡಾಕ್ ಅದಾಲತ್” 2024ರ ಆ.30 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರು, ಯಾದಗಿರಿ ವಿಭಾಗದಿಂದ ಆಯೋಜಿಸಲಾಗಿದೆ ಎಂದು ಯಾದಗಿರಿ ವಿಭಾಗ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಯಾದಗಿರಿ ವಿಭಾಗದ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಅಂಚೆ ವಿಷಯಗಳ ಕುರಿತು ತಮ್ಮ ಕುಂದು ಕೊರತೆಗಳನ್ನು ಪ್ರಸ್ತುತ ಪಡಿಸಲು ಇಚ್ಛಿಸುವವರು ತಮ್ಮ ಕುಂದುಕೊರತೆಗಳನ್ನು ವಿವರವಾಗಿ ಬರೆದು ಅಂಚೆ ಅಧೀಕ್ಷಕರು, ಯಾದಗಿರಿ ವಿಭಾಗ, ಯಾದಗಿರಿ 585 201ಗೆ 2024ರ ಆ.28ರ ಸಂಜೆ 4 ಗಂಟೆಯ ಒಳಗೆ ಅಥವಾ ಇದಕ್ಕೂ ಮುಂಚಿತವಾಗಿ ಕಳುಹಿಸುವಂತೆ ವಿನಂತಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕುಂದು ಕೊರತೆ ಇಮೇಲ್ doyadgiri.ka@indiapost.gov.in ನಲ್ಲಿ ಅಂಚೆ ಅಧೀಕ್ಷಕರು, ಯಾದಗಿರಿ ವಿಭಾಗ, ಯಾದಗಿರಿ -585 201ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.