ಮುಖ್ಯವಾಗಿ ಎಚ್‌ಐವಿ ಸೋಂಕಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದ ಸೂಜಿ ಸಿರಿಂಜುಗಳು, ಸಂಸ್ಕರಿಸದ ರಕ್ತ ಪಡೆದಾಗ ಸೋಂಕಿತ ಗರ್ಭಿಣಿ ತಾಯಿಯಿಂದ ಮಗುವಿಗೆ ಬರುವಂತಹುದು. ಈ ನಾಲ್ಕು ಕಾರಣಗಳಿಂದ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಗಳನ್ನು ಕಳಂಕ ತಾರತಮ್ಯ ಮಾಡದೆ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಚ್ಐವಿ ಸೋಂಕಿನ ಬಗ್ಗೆ ಜನರಲ್ಲಿ ಯಾವುದೇ ಭಯ ಬೇಡ. ಆದರೆ, ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯ ಸಲಹೆ ನೀಡಿದರು.

ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗ್ರಾಮದಲ್ಲಿ ನಡೆದ ಎಚ್‌ಐವಿ, ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್‌ಐವಿ ಸೋಂಕು ನಾಲ್ಕು ವಿಧಾನಗಳಿಂದ ಬರುವಂತಾಗಿದ್ದು, ಸೋಂಕಿಗೆ ಎಆರ್‌ಟಿ ಚಿಕಿತ್ಸೆಯನ್ನು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಮುಖ್ಯವಾಗಿ ಎಚ್‌ಐವಿ ಸೋಂಕಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದ ಸೂಜಿ ಸಿರಿಂಜುಗಳು, ಸಂಸ್ಕರಿಸದ ರಕ್ತ ಪಡೆದಾಗ ಸೋಂಕಿತ ಗರ್ಭಿಣಿ ತಾಯಿಯಿಂದ ಮಗುವಿಗೆ ಬರುವಂತಹುದು. ಈ ನಾಲ್ಕು ಕಾರಣಗಳಿಂದ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಗಳನ್ನು ಕಳಂಕ ತಾರತಮ್ಯ ಮಾಡದೆ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದರು.

ಆರೋಗ್ಯ ಸುರಕ್ಷಾಧಿಕಾರಿ ರಂಜಿತ ಕೆ. ಕುಮಾರಸ್ವಾಮಿ, ಶ್ವೇತಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಇದೇ ವೇಳೆ ಸ್ನೇಹಜೀವಿ ಸಾಂಸ್ಕೃತಿಕ ಯುವಕ ಸಂಘದ ವತಿಯಿಂದ ಜಾನಪದ ವೈವಿಧ್ಯಮಯ ಜಾಗೃತಿ, ಬೀದಿ ನಾಟಕದ ಮೂಲಕ ಎಚ್‌ಐವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ತಡಗವಾಡಿ ನಾಗರಾಜು, ಬೆಸಗರಹಳ್ಳಿ ಗುರುಸಿದ್ದು, ಪ್ರಮೋದ್‌ಕುಮಾರ್, ದೇವರಾಜ್ ಕೊಪ್ಪ, ಸಂತೆಕಸಲಗೆರೆ ರಾಜಣ್ಣ, ಶ್ವೇತಾ ಸಿ.ಎಂ., ಜಯಮ್ಮ, ಅನಸೂಯ ಅವರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಳೆ ವಿದ್ಯುತ್ ವ್ಯತ್ಯಯ

ಕನ್ನಡಪ್ರಭ ವಾರ್ತೆ ಮಂಡ್ಯ

66/11 ಕೆ.ವಿ ಕೆಐಎಡಿಬಿ ಮತ್ತು ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಡಿ.13ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕಾ ಬಡಾವಣೆಗಳು, ಎಂ.ಸಿ.ರಸ್ತೆ, ತಾವರೆಗೆರೆ, ನೆಹರು ನಗರ, ಉದಯಗಿರಿ, ಸಾದತ್ ಮೊಹಲ್ಲಾ, ಚನ್ನಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಬೆಂಗಳೂರು ಮುಖ್ಯ ರಸ್ತೆಯ ಹೆಬ್ಬಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳು

ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ ಐ.ಪಿ ವ್ಯಾಪ್ತಿ, ಕೀಲಾರ ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ. ವ್ಯಾಪ್ತಿ, ಬೂದನೂರು, ಭೂತನ ಹೊಸೂರು, ಚನ್ನಪ್ಪನ ದೊಡ್ಡಿ, ಹಂಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹೊಡಾಘಟ್ಟ, ಕೀಲಾರ, ಹನಕೆರೆ, ಹಳೆ ಬೂದನೂರು, ಹೊಸಬೂದನೂರು, ಈಚಗೆರೆ, ಹಂಬರಹಳ್ಳಿ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಶ್ರೀನಿವಾಸಪುರ ಗೇಟ್, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ, ಬಸವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.