ವಿಕಲಚೇತನ ಮಕ್ಕಳ ಬಗ್ಗೆ ಕೀಳರಿಮೆ ಬೇಡ: ಎಂ.ಪಿ.ಮಾಗಿ

| Published : Jan 21 2024, 01:30 AM IST

ಸಾರಾಂಶ

ಗುಳೇದಗುಡ್ಡ: ಪಟ್ಟಣದ ಬಾಲಕರ ಪ.ಪೂ. ಕಾಲೇಜಿನಲ್ಲಿ 2023-24ನೇ ಸಾಲಿನ ವಿಕಲಚೇತನ ಮಕ್ಕಳ ಕ್ರೀಡೆ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಾಲಕಿಯರ ಪ.ಪೂ. ಕಾಲೇಜು(ಪ್ರೌಢಶಾಲೆ ವಿಭಾಗ) ಉಪಪ್ರಾಚಾರ್ಯ ಎಂ.ಪಿ. ಮಾಗಿ ಮಾತನಾಡಿ, ವಿಕಲಚೇತನ ಮಕ್ಕಳ ಬಗ್ಗೆ ಕೀಳರಿಮೆ ಬೇಡ. ಇತರ ಸಾಮಾನ್ಯ ಮಕ್ಕಳಂತೆ ಕಾಳಜಿ ವಹಿಸಿ ಸಮನ್ವಯಗೊಳಿಸಿ ಬೋಧಿಸಿದರೆ ಇತರರಂತೆ ಸಾಧನೆ ಮಾಡುತ್ತಾರೆ ಎಂದರು.ವಿಕಲಚೇತನ ಮಕ್ಕಳಿಗೆ ಚಮಚದಲ್ಲಿ ಲಿಂಬೆ ಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ಕೆರೆದಡ, ಕಪ್ಪೆ ಓಟ, ಓಟದ ಸ್ಪರ್ಧೆ ಸೇರಿಂತೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವಿಕಲಚೇತನ ಮಕ್ಕಳ ಬಗ್ಗೆ ಕೀಳರಿಮೆ ಬೇಡ. ಇತರ ಸಾಮಾನ್ಯ ಮಕ್ಕಳಂತೆ ಕಾಳಜಿ ವಹಿಸಿ ಸಮನ್ವಯಗೊಳಿಸಿ ಬೋಧಿಸಿದರೆ ಇತರರಂತೆ ಸಾಧನೆ ಮಾಡುತ್ತಾರೆ ಎಂದು ಬಾಲಕೀಯರ ಪ.ಪೂ. ಕಾಲೇಜು(ಪ್ರೌಢಶಾಲೆ ವಿಭಾಗ) ಉಪಪ್ರಾಚಾರ್ಯ ಎಂ.ಪಿ. ಮಾಗಿ ಹೇಳಿದರು.

ಬಾಲಕರ ಪ.ಪೂ. ಕಾಲೇಜಿನಲ್ಲಿ 2023-24ನೇ ಸಾಲಿನ ವಿಕಲಚೇತನ ಮಕ್ಕಳ ಕ್ರೀಡೆ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದ್ದು, ಪಾಲಕರು ಮತ್ತು ಶಿಕ್ಷಕರು ಸಹಿತ ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ವಿ.ಎಸ್. ಮಡಿವಾಳರ, ಸಮೂಹ ಸಂಪನ್ಮೂಲ ವ್ಯಕ್ತಿ ಜಗದೀಶ ಬುಳ್ಳಾ, ಮಂಜುನಾಥ ಉಂಕಿ, ಸೇರಿದಂತೆ ವಿಕಲಚೇತನ ಮಕ್ಕಳು, ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು. ನಂತರ ವಿಕಲಚೇತನ ಮಕ್ಕಳು ಒಂದು ದಿನದ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿ ವಿಭೂತಿ ತಯಾರಿಕೆ, ಗೋಶಾಲೆ ವೀಕ್ಷಣೆ, ಸದಾಶಿವ ಶ್ರೀಗಳ ಲಿಂಗೈಕ್ಯ ಮಂಟಪ ವೀಕ್ಷಣೆ ಮಾಡಿದರು.

ನಂತರ ವಿಕಲಚೇತನ ಮಕ್ಕಳಿಗೆ ಚಮಚದಲ್ಲಿ ಲಿಂಬೆ ಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ಕೆರೆದಡ, ಕಪ್ಪೆ ಓಟ, ಓಟದ ಸ್ಪರ್ಧೆ ಸೇರಿಂತೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.