ದೇವಸ್ಥಾನದ ಬಳಿ ಬಾರ್‌ ತೆರೆಯಬೇಡಿ

| Published : Nov 06 2024, 12:37 AM IST

ಸಾರಾಂಶ

ತಾಲೂಕಿನ ಗೌಡಗೆರೆ ಹೋಬಳಿಯ ಪುರಲೆಹಳ್ಳಿ ಭೂತಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ನಿರ್ಮಾಣವಾಗಿರುವ ಸಿ.ಎಲ್. 7 ಬಾರ್ ಆ್ಯಂಡ್ ರೆಸ್ಟೋರೆಂಟ್‌ನ್ನು ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಾತಾಲೂಕಿನ ಗೌಡಗೆರೆ ಹೋಬಳಿಯ ಪುರಲೆಹಳ್ಳಿ ಭೂತಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ನಿರ್ಮಾಣವಾಗಿರುವ ಸಿ.ಎಲ್. 7 ಬಾರ್ ಆ್ಯಂಡ್ ರೆಸ್ಟೋರೆಂಟ್‌ನ್ನು ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಭೂತಪ್ಪ ಸ್ವಾಮಿ ದೇವಸ್ಥಾನದ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಸದಾನಂದ ಗೌಡ ಮಾತನಾಡಿ, ನೂರಾರು ಹೆಣ್ಣು ಮಕ್ಕಳ ಭಕ್ತವೃಂದ ಪ್ರತಿ ಶನಿವಾರ, ಭಾನುವಾರ ಹಾಗೂ ಅಮಾವಾಸ್ಯೆ ದಿನ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಭಕ್ತರ ರಕ್ಷಣೆಗಾಗಿ ತಕ್ಷಣ ಈ ಬಾರ್ ಲೈಸೆನ್ಸ್ ರದ್ದು ಪಡಿಸುವಂತೆ ಒತ್ತಾಯಿಸಿದರು. ನಿವಾಸಿ ಪಾರ್ವತಮ್ಮ ಮಾತನಾಡಿ, ಪುರ್ಲೆಹಳ್ಳಿ ಭೂತಪ್ಪ ದೇವಸ್ಥಾನ ಹಲವಾರು ವರ್ಷಗಳಿಂದ ತನ್ನದೇ ಆದ ಪಾತಿವ್ರತೆಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಪ್ರಾರಂಭವಾದರೆ ಕುಡುಕರ ಹಾವಳಿ ಹೆಚ್ಚಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಬಾರದು ಎಂದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಈಶ್ವರಪ್ಪ, ಶಿವಣ್ಣ , ಮನೋಹರ್ ನಾಯಕ ತಾವರೆಕೆರೆ, ಕೆ. ರಂಗನಹಳ್ಳಿ ಬಲರಾಮಣ್ಣ , ಉಗ್ರಪ್ಪ, ಮೊಸರುಕುಂಟೆ ನಾಗಣ್ಣ, ಪುರ್ಲೆಹಳ್ಳಿ ಮರ್ಡಪ್ಪ, ಬೋರಕ್ಕ ರಂಗನಹಳ್ಳಿ ಹಾಜರಿದ್ದರು.