ಸಾರಾಂಶ
ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದು ಎಂದು ಡಾ. ಕೇಶವ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ನಿರ್ದಿಷ್ಟ ಅವಧಿಗೆ ರಕ್ತ ನೀಡುವುದರಿಂದ ಹೊಸ ರಕ್ತ ಸಂಚಲನವಾಗುತ್ತದೆ. ಇದರಿಂದ ಹೃದಯಾಘಾತ ನಿಂತ್ರಿಸಲು ಸಾಧ್ಯ. ದೇಹದಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ಇನ್ನೊಬ್ಬರ ಜೀವ ಉಳಿಸಬಹುದು. ರಕ್ತ ಕೊಡುವುದರಿಂದ ನಾಲ್ಕು ಜೀವ ಉಳಿಸಬಹುದು ಎಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕುಮಾರೇಶ್ವರ ಆಸ್ಪತ್ರೆ ಪೈಥಾಲಾಜಿಸ್ಟ್ ಕೇಶವ ಕುಲಕರ್ಣಿ ಹೇಳಿದರು.ಬಸವೇಶ್ವರ ಕಲಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕಗಳು, ರೆಡ್ ಕ್ರಾಸ್ ಸಂಸ್ಥೆ ಹಾಗೂ ಬಿವಿವಿ ಸಂಘದ ಬಾಗಲಕೋಟೆ ರಕ್ತ ಭಂಡಾರ ಸಹಯೋಗದಲ್ಲಿ ಮುಚಖಂಡಿ ಗ್ರಾಮದಲ್ಲಿ ರಕ್ತ ಗುಂಪು ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ರಕ್ತದಾನ ಮಾಡಿದರು. ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಶಿಬಿರದ ನಿರ್ವಹಣೆ ಮಾಡಿತು. ಎನ್.ಎಸ್.ಎಸ್ 1 ಮತ್ತು 2ನೇ ಘಟಕಾಧಿಕಾರಿಗಳಾದ ಎಂ.ಎಚ್. ವಡ್ಡರ, ಡಾ.ವಿರೂಪಾಕ್ಷ ಎನ್.ಬಿ, ದೈಹಿಕ ನಿರ್ದೇಶಕ ಎಂ.ಎಂ ದೇವನಾಳ, ಪ್ರಾಧ್ಯಾಪಕ ನಟರಾಜ ಇಂಗಳಗಿ ಉಪಸ್ಥಿತರಿದ್ದರು.