ಸಾರಾಂಶ
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಗೆ ಲಯನ್ಸ್ ಮಾಜಿ ಗವರ್ನರ್ ವಿ.ಜಿ. ಶೆಟ್ಟಿ ಅವರು ತಮ್ಮ ಕಲ್ಯಾಣಿ ಗುಂಡು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೩ ಲಕ್ಷ ರು. ಗಳ ದೇಣಿಗೆಯನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಟೌನ್‌ಹಾಲ್‌ನಲ್ಲಿ ಜರುಗಿದ ಉಡುಪಿ ಮಿಡ್‌ಟೌನ್ ಲಯನ್ಸ್ ಕ್ಲಬ್‌ನ ಪದಗ್ರಹಣ ಸಂದರ್ಭದಲ್ಲಿ, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಗೆ ಲಯನ್ಸ್ ಮಾಜಿ ಗವರ್ನರ್ ವಿ.ಜಿ. ಶೆಟ್ಟಿ ಅವರು ತಮ್ಮ ಕಲ್ಯಾಣಿ ಗುಂಡು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೩ ಲಕ್ಷ ರು. ಗಳ ದೇಣಿಗೆಯನ್ನು ನೀಡಿದರು.ಈ ಕೊಡುಗೆಯನ್ನು ಸ್ವೀಕರಿಸಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಸಂಸ್ಥೆಯ ಉಪಾಧ್ಯಕ್ಷರಾದ ವಿ.ಜಿ. ಶೆಟ್ಟಿ ಅವರಿಗೆ ಮತ್ತು ಲಯನ್ಸ್ ಸೇವಾ ಸಂಸ್ಥೆಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಲಯನ್ಸ್ ಗವರ್ನರ್ ಮಹಮ್ಮದ್ ಹನೀಫ್, ಕ್ಲಬ್‌ನ ನೂತನ ಅಧ್ಯಕ್ಷ ಡಾ. ಗಣನಾಥ ಎಕ್ಕಾರ್, ನಿಕಟಪೂರ್ವ ಅಧ್ಯಕ್ಷ ಅನಂತ ಶೆಟ್ಟಿ, ಮಂಗಳೂರು ಲಯನ್ಸ್‌ನ ಮಾಜಿ ಗವರ್ನರ್ ಡಾ. ಮೆಲ್ವಿನ್ ಡಿಸೋಜ, ಉಡುಪಿ ಲಯನ್ಸ್‌ನ ಮಾಜಿ ಗವರ್ನರ್ ಬಸ್ರೂರು ರಾಜೀವ ಶೆಟ್ಟಿ, ಕ್ಲಬ್‌ನ ಕಾರ್ಯದರ್ಶಿ ಹಾಗೂ ಕಲಾರಂಗದ ಸದಸ್ಯರಾದ ಎ. ನಟರಾಜ ಉಪಾಧ್ಯ ಉಪಸ್ಥಿತರಿದ್ದರು.