ಬನ್ನಿಮಂಟಪದ ಕಾಮಗಾರಿಗೆ ಸಂಸದರ ಹೆಸರಲ್ಲಿ ದೇಣಿಗೆ

| Published : Sep 11 2024, 01:10 AM IST

ಬನ್ನಿಮಂಟಪದ ಕಾಮಗಾರಿಗೆ ಸಂಸದರ ಹೆಸರಲ್ಲಿ ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಬನ್ನಿಮಂಟಪ ಕಾಮಗಾರಿಗೆ ಸಂಸದ ಡಾ.ಮಂಜುನಾಥ್ ಹೆಸರಿನಲ್ಲಿ ೮೦ ಸಾವಿರ ರು. ದೇಣಿಗೆ ನೀಡಿದರು.

ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಬನ್ನಿಮಂಟಪ ಕಾಮಗಾರಿಗೆ ಸಂಸದ ಡಾ.ಮಂಜುನಾಥ್ ಹೆಸರಿನಲ್ಲಿ ೮೦ ಸಾವಿರ ರು. ದೇಣಿಗೆ ನೀಡಿದರು.

ಗ್ರಾಮದಲ್ಲಿ ಪುರಾತನ ಬನ್ನಿಮಂಟಪದ ಜೀರ್ಣೋದ್ಧಾರ ಮಾಡಲು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ೨ ಲಕ್ಷ ಹಣವನ್ನು ಸಂಸದರ ಹೆಸರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ನೀಡುವ ಮೂಲಕ ಕಾರ್ಯಕರ್ತರು ಮಾದರಿ ನಡೆ ಅನುಸರಿಸಿದ್ದಾರೆ. ಗ್ರಾಮದ ಮೈತ್ರಿ ಪಕ್ಷದ ಮುಖಂಡರ ಈ ಕಾರ್ಯಕ್ಕೆ ಸಂಸದ ಡಾ.ಮಂಜುನಾಥ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಣವನ್ನು ಎರಡು ಪಕ್ಷದ ಮುಖಂಡರು ಕಾಮಗಾರಿ ಉಸ್ತುವಾರಿಗಳಿಗೆ ಹಸ್ತಾಂತರಿಸಿದರು.

ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಬಿ.ನಾಗೇಶ್, ಮುಖಂಡರಾದ ಸೊಸೈಟಿ ರಾಜಣ್ಣ, ಅಭಿಲಾಷ, ಟಿ.ಕೆ.ಮುರಳಿ, ಟಿ.ಪಿ.ಪ್ರಕಾಶ್, ಟಿ.ಎಂ.ಅನಿಲ್, ಟಿ.ಸಿ.ಮೂರ್ತಿ, ಪುಟಾಣಿಗೌಡ, ಟಿ.ಎಸ್.ಮಹದೇವ್, ಚಂದ್ರೇಗೌಡ, ತೂತ್ತೂರಿ ರಮೇಶ್, ಹಾಲಿನ ದೊಡ್ಡಣ್ಣ, ಶಿವಲಿಂಗಯ್ಯ(ಜೂಲಿ), ಮಲ್ಲಿಕಾರ್ಜುನ್, ಗಾಡಿ ಕುಮಾರ್ ಇತರರಿದ್ದರು.

ಪೊಟೋ೧೦ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಬನ್ನಿಮಂಟಪ ಜೀರ್ಣೋದ್ಧಾರ ಕಾಮಗಾರಿಗೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಂಸದರ ಹೆಸರಿನಲ್ಲಿ ದೇಣಿಗೆ ನೀಡಿದರು.