ವೃಕ್ಷೋಥಾನ್ ಹೆರಿಟೇಜ್ ರನ್ ಗೆ ₹10 ಲಕ್ಷ ದೇಣಿಗೆ

| Published : Dec 19 2023, 01:45 AM IST

ವೃಕ್ಷೋಥಾನ್ ಹೆರಿಟೇಜ್ ರನ್ ಗೆ ₹10 ಲಕ್ಷ ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರಲ್ಲಿ ಡಿಸೆಂಬರ್ 24ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಪ್ರೋತ್ಸಾಹಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂದಾಳತ್ಸದ ಸಿದ್ಧಸಿರಿ ಸೌಹಾರ್ಧ ಸಹಕಾರಿ ಸಂಘ 10 ಲಕ್ಷ ಪ್ರಾಯೋಜಕತ್ವ ನೀಡಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕೋಟಿವೃಕ್ಷ ಅಭಿಯಾನ ಅಂಗವಾಗಿ ಡಿಸೆಂಬರ್ 24ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಪ್ರೋತ್ಸಾಹಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಂದಾಳತ್ಸದ ಸಿದ್ಧಸಿರಿ ಸೌಹಾರ್ಧ ಸಹಕಾರಿ ಸಂಘ ₹ 10 ಲಕ್ಷ ಪ್ರಾಯೋಜಕತ್ವ ನೀಡಿದೆ.

ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು, ಮರಗಳನ್ನು ಬೆಳೆಸಿ, ಅರಣ್ಯ ಪ್ರಮಾಣ ಹೆಚ್ಚಿಸುವುದು. ವಿಜಯಪುರ ನಗರದಲ್ಲಿನ ವಿವಿಧ ಐತಿಹಾಸಿಕ ಸ್ಮಾರಕಗಳ ಕುರಿತು ಜಾಗೃತಿ ಮೂಡಿಸಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಹೆರಿಟೇಜ್ ರನ್ ಪ್ರೊತ್ಸಾಹಿಸಲು ಸಿದ್ಧಸಿರಿ ಸೌಹರ್ದ ಸಹಕಾರಿ ಸಂಘದಿಂದ ₹ 10 ಲಕ್ಷ ಚೆಕ್ ನ್ನು ಸಿದ್ಧಸಿರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಇಂದು ಕೋಟಿವೃಕ್ಷ ಅಭಿಯಾನ ಸಂಚಾಲಕ ಪ್ರೊ.ಮುರುಗೇಶ ಪಟ್ಟಣಶೆಟ್ಟಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೋಟಿವೃಕ್ಷ ಅಭಿಯಾನದ ಡಾ.ಮಹಾಂತೇಶ ಬಿರಾದಾರ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಅಮೀತ ಬಿರಾದಾರ, ಸೋಮು ಮಠ, ಸಿದ್ಧಸಿರಿ ನಿರ್ದೇಶಕರಾದ ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.