ದಾಬಸ್‍ಪೇಟೆ: ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಕಲಿಕೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ವಿವಿಧ ಕಂಪನಿಗಳು ಹಾಗೂ ಸಮುದಾಯದ ಸಹಭಾಗಿತ್ವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಮ್ಮ ಕಂಪನಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದು ಟಾಪ್ ಸಚ್ ಕಂಪನಿಯ ಸಿಇಒ ರಿತೇಶ್ ಆರ್.ನಾಯಕ್ ಅಭಿಪ್ರಾಯಪಟ್ಟರು.

ಸೋಂಪುರ ಹೋಬಳಿಯ ನಿಡವಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಾಪ್ ಸಚ್ ಕಂಪನಿ ಸಿಎಸ್‍ಆರ್ ಅನುದಾನದಲ್ಲಿ 1.5 ಲಕ್ಷ ಮೌಲ್ಯದ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಸುಭಾಷ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಮ್ಮ ಕಂಪನಿಯಿಂದ 3.65 ಲಕ್ಷ ವೆಚ್ಚದಲ್ಲಿ ನಿಡವಂದ, ಕರಿಮಣ್ಣೆ, ತಟ್ಟೆಕೆರೆ, ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳು ಸೇರಿದಂತೆ ಅಲ್ಪಯ್ಯನಪಾಳ್ಯ ಗ್ರಾಮಕ್ಕೆ ಹೈಮಾಸ್ಟ್‌ ದೀಪಗಳ ಕೊಡುಗೆ ನೀಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಂಪನಿಯ ಹಣಕಾಸು ಮುಖ್ಯಸ್ಥ ನಿಕಿಲೇಷ್, ಗ್ರಾಪಂ ಮಾಜಿ ಉಪಾಧ್ಯಕ್ಷ ಪರಮೇಶ್‌, ಜಗದೀಶ್, ಬೋಜರಾಜು ಇತರರಿದ್ದರು.

ಪೋಟೋ 5 :


ಸೋಂಪುರ ಹೋಬಳಿಯ ನಿಡವಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟಾಪ್ ಸಚ್ ಕಂಪನಿಯೂ ಸಿಎಸ್‍ಆರ್ ಅನುದಾನದಲ್ಲಿ ಕಂಪನಿಯ ಸಿಬ್ಬಂದಿ ಹಾಗೂ ಮುಖಂಡರು ಶಾಲಾ ಪರಿಕರಗಳನ್ನು ವಿತರಿಸಿದರು.