ಸಾರಾಂಶ
ಹೊಸಕೋಟೆ: ದಾನಿಗಳಿಂದ ಶಾಲೆಗೆ ಸೌಲಭ್ಯಗಳನ್ನು ಪಡೆಯುವುದು ಹೆಚ್ವಲ್ಲ, ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಉಳಿಸಿಕೊಳ್ಳುವುದು ಮುಖ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ದಾನಿಗಳಿಂದ ಶಾಲೆಗೆ ಸೌಲಭ್ಯಗಳನ್ನು ಪಡೆಯುವುದು ಹೆಚ್ವಲ್ಲ, ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಉಳಿಸಿಕೊಳ್ಳುವುದು ಮುಖ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲಾ ಅವರಣದಲ್ಲಿ ಕೆ ಆರ್ ಪುರ ಬಳಿಯ ಗಾರ್ಡನ್ ಸಿಟಿ ಕಾಲೇಜಿನ ಚಾನ್ಸಲರ್ ಜೋಸೆಫ್ ತಮ್ಮ ವೈಯಕ್ತಿಕ ವೆಚ್ಚದಲ್ಲಿ 10 ಬ್ಲಾಕ್ ಗಳ ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ಸುಮಾರು 120 ವರ್ಷಗಳ ಹಿಂದೆ ನಗರದ ವೀರಶೈವ ಸಮಾಜದ ಚಟ್ಟೆ ಬಸಪ್ಪನವರು ಈ ಶಾಲೆಗೆ 4 ಎಕರೆ ಜಮೀನು ದಾನವಾಗಿ ನೀಡಿದ್ದು ಇಂದು ಈ ಶಾಲೆಯಲ್ಲಿ 800 ಮಕ್ಕಳು ವಿದ್ಯೆ ಕಲಿಯುತಿದ್ದಾರೆ. ದಾನಿಗಳು ನೀಡುವ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಜೋಪಾನವಾಗಿ ಬಳಸಿಕೊಳ್ಳಿ ಎಂದು ಶಾಲಾ ಆಡಳಿತ ಮಂಡಳಿಯವರಿಗೆ ಕಿವಿಮಾತು ಹೇಳಿದರು.
ಸಂಸದ ಬಚ್ಚೇಗೌಡ ಮಾತನಾಡಿ, ನನ್ನ ಹೆಸರಿನಲ್ಲಿ 10 ಬ್ಲಾಕ್ ಗಳ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ನಾನೂ ಸಹ ಬಾಲ್ಯದಲ್ಲಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇಂದು ಈ ಶಾಲೆಯಲ್ಲಿ 800 ಮಕ್ಕಳು ಓದುತ್ತಿದ್ದು ಅವರಲ್ಲಿ ಹೆಣ್ಣು ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತಸದ ವಿಚಾರ ಎಂದರು.ಗಾರ್ಡನ್ ಸಿಟಿ ಕಾಲೇಜಿನ ಚಾನ್ಸಲರ್ ಜೋಸೆಫ್ ಮಾತನಾಡಿ, ನಾನು ಗಾರ್ಡನ್ ಸಿಟಿ ಕಾಲೇಜು ಸ್ಥಾಪಿಸಿದ್ದು ಅದರಲ್ಲಿ 82 ದೇಶದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಬಳಿ ಗಾರ್ಡನ್ ಸಿಟಿ ಯೂನಿವರ್ಸಿಟಿ ತೆರೆಯಲಿದ್ದು ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಗಾರ್ಡನ್ ಸಿಟಿ ಕಾಲೇಜಿನ ಕ್ರಿಸ್ಟೋ ಜೋಸೆಫ್, ಕೇಶವ್, ಎಸ್ ಡಿಎಂಸಿ ಅದ್ಯಕ್ಷ ಡಿ.ಎಸ್.ರಾಜ್ ಕುಮಾರ್, ಸ್ಥಳ ದಾನಿಗಳಾದ ಶಿವಕುಮಾರ್, ಬಿಇಒ ಪದ್ಮನಾಭ್, ನಗರಸಭೆ ಆಯುಕ್ತ ಜಹೀರ್ ಅಬ್ಬಾಸ್, ಮುಖಂಡರಾದ ಆರಾದ್ಯ, ಮುಖ್ಯ ಶಿಕ್ಷಕಿ ಗ್ಲಾಡಿಯಸ್ ಇಬ್ರೇಶಿಯ ಮೊದಲಾದವರು ಹಾಜರಿದ್ದರು.ಫೋಟೋ: 15 ಹೆಚ್‌ಎಸ್‌ಕೆ 1
ಹೊಸಕೋಟೆಯ ಜಿಕೆಬಿಎಂಎಸ್ ಶಾಲಾ ಅವರಣದಲ್ಲಿ ಗಾರ್ಡನ್ ಸಿಟಿ ಕಾಲೇಜಿನ ಚಾನ್ಸಲರ್ ಜೋಸೆಫ್ ವೈಯಕ್ತಿಕ ಅನುದಾನಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಸದ ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ಗುದ್ದಲಿಪೂಜೆ ನೆರವೇರಿಸಿದರು.