ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕಾಡಂಚಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ದಾನಿಗಳು ಮುಂದೆ ಬಂದು ಆರ್ಥಿಕ ನೆರವು ನೀಡಬೇಕು ಎಂದು ಶಾಲಾ ಮುಖ್ಯ ಶಿಕ್ಷಕ ಮಹೇಂದರ್ ಅಭಿಮತ ವ್ಯಕ್ತಪಡಿಸಿದರು.ಹನೂರು ಶೈಕ್ಷಣಿಕ ವಲಯದ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ ಗ್ರಾಮದ ಕಾಡಂಚಿನ 1ರಿಂದ 7ನೇ ತರಗತಿ 60 ವಿದ್ಯಾರ್ಥಿಗಳಿಗೆ ಟಿ.ನರಸೀಪುರ ತಾಲೂಕು ಸುಜ್ಜಲೂರು ಗ್ರಾಮದ ಮಹದೇವಸ್ವಾಮಿ ಕುಟುಂಬದವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ವೆಟರ್ ವಿತರಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಡಂಚಿನ ಪ್ರದೇಶದ ಮಧ್ಯ ಭಾಗದಲ್ಲಿ ಬರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳು ಮುಂದೆ ಬಂದು ಮಕ್ಕಳಿಗೆ ಸ್ವೆಟರ್ ವಿತರಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಶಾಲೆಯ ಹಳೆಯ ಕಟ್ಟಡ ದುರಸ್ತಿಗೆ ದಾನಿಗಳು ಮುಂದೆ ಬಂದು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪ್ರಗತಿಗೆ ನೆರವು ನೀಡಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಮಹದೇವಸ್ವಾಮಿ, ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮತ್ತು ಶಾಲೆಯ ಹಳೆಯ ಕಟ್ಟಡ ದುರಸ್ತಿಗೆ ನಮ್ಮ ಗ್ರಾಮದ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾಗಿರುವ ಪ್ರಗತಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಜ್ಜಲೂರು ಗ್ರಾಮದ ಮಹದೇವಸ್ವಾಮಿ ತಂದೆ ಸಿದ್ದಯ್ಯ, ತಾಯಿ ಭಾಗ್ಯಮ್ಮ ಮತ್ತು ಅವರ ಪತ್ನಿ ಭಾನುಪ್ರಿಯ, ಪ್ರಗತಿಪರ ಚಿಂತಕ ಚೇತನ್, ಸಹ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.