ಸಾರಾಂಶ
ವಿಶೇಷಚೇತನರಲ್ಲದವರೂ ಕೂಡ ಇತ್ತೀಚೆಗೆ ಪ್ರಭಾವ ಬೀರುವ ಮೂಲಕ ಸುಳ್ಳು ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ದೇವರು ಸದೃಢ ಆರೋಗ್ಯ ಕರುಣಿಸಿದ್ದರೂ ಇಂತಹ ವಾಮಮಾರ್ಗದಿಂದ ವಿಶೇಚ ಚೇತನರ ನ್ಯಾಯಯುತ ಸೌಲಭ್ಯಗಳಿಗೆ ಕನ್ನ ಹಾಕದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಬ್ಯಾಡಗಿ: ವಿಶೇಷಚೇತನರಲ್ಲದವರೂ ಕೂಡ ಇತ್ತೀಚೆಗೆ ಪ್ರಭಾವ ಬೀರುವ ಮೂಲಕ ಸುಳ್ಳು ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ದೇವರು ಸದೃಢ ಆರೋಗ್ಯ ಕರುಣಿಸಿದ್ದರೂ ಇಂತಹ ವಾಮಮಾರ್ಗದಿಂದ ವಿಶೇಚ ಚೇತನರ ನ್ಯಾಯಯುತ ಸೌಲಭ್ಯಗಳಿಗೆ ಕನ್ನ ಹಾಕದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಪಟ್ಟಣದ ಕಲಾಭವನದಲ್ಲಿ ಶನಿವಾರ ವಿಶೇಷ ಚೇತನರಿಗೆ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು. ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದ್ದು ಯಾವುದೇ ಮುಜುಗುರಕ್ಕೆ ಒಳಗಾಗದೇ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಎಲ್ಲರಂತೆ ಸ್ವಾಭಿಮಾನದ ಬದುಕನ್ನು ನಡೆಸುವಂತೆ ಕರೆ ನೀಡಿದರು.ದೈಹಿಕ ನೂನ್ಯತೆಗಳು ಸಾಮಾನ್ಯ. ಅದಕ್ಕೆ ಮೌಢ್ಯದ ಹಣೆಪಟ್ಟಿ ಕಟ್ಟುವ ಅಗತ್ಯವಿಲ್ಲ ಅದನ್ನು ಮೆಟ್ಟಿ ನಿಂತವರು ಬಹುದೊಡ್ಡ ಸಾಧಕರಾಗಿ ಹೊರಹೊಮ್ಮಿದ್ದಾರೆ ಅಷ್ಟಕ್ಕೂ ವಿಶೇಷ ಚೇತನರು ಅತ್ಯಂತ ಪ್ರತಿಭಾವಂತಗಾಗಿರುತ್ತಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧಮಕ್ಕಳಲ್ಲಿರುವ ಅಸಾಮಾನ್ಯ ಸಂಗೀತ ವಿದ್ಯೆ ಇದಕ್ಕೊಂದು ಉತ್ತಮ ಉದಾಹರಣೆಯಾಗಿದ್ದು, ತಮ್ಮ ಪ್ರತಿಭೆಯಿಂದಲೇ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಲವು ನೂನ್ಯತೆಗೆ ಅನುಗುಣವಾಗಿ ವೀಲ್‌ಚೇರ್, ಶ್ರವಣ ಸಾಧನ, ತ್ರೈಸಿಕಲ್ ಸೇರಿದಂತೆ ಹಲವು ಪರಿಕರ ವಿತರಿಸಲಾಯಿತು. ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಂಕರ ಕುಸಗೂರ, ಫಕ್ಕೀರಮ್ಮ ಛಲವಾದಿ, ರಾಜಣ್ಣ ಕಳ್ಯಾಳ, ವಿಷೇಶ ಚೇತನರ ಸಂ ಘದ ತಾಲೂಕಾಧ್ಯಕ್ಷ ಪಾಂಡುರAಗ ಸುತಾರ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶಿಮಿ, ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಗೀರಿಶ ಇಂಡಿಮಠ, ಮಜೀದ್ ಮುಲ್ಲಾ ಬಿಆರ್‌ಸಿಗಳಾದ ಸುಭಾಷ, ಸಂಧ್ಯಾರಾಣಿ ದೇಶಪಾಂಡೆ ಸೇರಿ ದಂತೆ ಹಲವರು ಭಾಗವಹಿಸಿದ್ದರು.ತಪ್ಪಿತಸ್ಥರ ವಿರುದ್ಧ ಕ್ರಮ:ಬೋಗಸ್ ಪ್ರಮಾಣ ಪತ್ರ ನೀಡಿದ ಹಲವು ಪ್ರಕರಣಗಳು ನನ್ನ ಬಳಿ ಬಂದಿವೆ. ಅಷ್ಟಕ್ಕೂ ವಿಶೇಷ ಚೇತನರ ಸಂಘದವರು ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.