ಸಾರಾಂಶ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಲ ಜೀವನ್ ಯೋಜನೆಯಡಿ ತಾಲೂಕಿನ ನಾಲ್ಕು ಗ್ರಾಮಗಳಿಗೆ ಸುಮಾರು ೧.೪೦ ಕೋಟಿ ರು. ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಹರಿಸುವ ಸಲುವಾಗಿ ಶಾಸಕ ಎಂ.ಟಿ. ಕೃಷ್ಣಪ್ಪನವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಲ ಜೀವನ್ ಯೋಜನೆಯಡಿ ತಾಲೂಕಿನ ನಾಲ್ಕು ಗ್ರಾಮಗಳಿಗೆ ಸುಮಾರು ೧.೪೦ ಕೋಟಿ ರು. ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಹರಿಸುವ ಸಲುವಾಗಿ ಶಾಸಕ ಎಂ.ಟಿ. ಕೃಷ್ಣಪ್ಪನವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ತಾಲೂಕಿನ ದಂಡಿನಶಿವರ ಹೋಬಳಿ ಯಲ್ಲದಬಾಗಿ, ಹಟ್ಟಿಹಳ್ಳಿ ಮತ್ತು ಒಬ್ಬೆ ನಾಗಸಂದ್ರ ಗ್ರಾಮದಲ್ಲಿ ತಲಾ ೩೦ ಲಕ್ಷ ರು. ವೆಚ್ಚದ ಕಾಮಗಾರಿ. ಮಾಯಸಂದ್ರ ಹೋಬಳಿಯ ಮುದಿಗೆರೆ ಗ್ರಾಮದಲ್ಲಿ ೫೦ ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಮನೆಯ ಬಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿ ಗುಣಮಟ್ಟ ಕಾಪಾಡಬೇಕು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಯಲ್ಲದಬಾಗಿ ಸೋಮಶೇಖರ್, ದಂಡಿನಶಿವರ ರಾಜಕುಮಾರ್, ಬಡಗರಹಳ್ಳಿ ತ್ಯಾಗರಾಜು, ವೆಂಕಾಟಾಪುರ ಯೋಗೀಶ್, ದುಂಡಾ ಸುರೇಶ್, ಇಂಜಿನಿಯರ್ ರವಿಕುಮಾರ್ ಗುತ್ತಿಗೆದಾರರಾದ ವಿಠಲದೇವರಹಳ್ಳಿ ಹರೀಶ್, ಮುದಿಗೆರೆ ಕೆಂಪೇಗೌಡ, ಶ್ರೀಶೈಲ ಸೇರಿದಂತೆ ಇತರರು ಇದ್ದರು.