ನಾಡಿಗೆ ಡಾ.ಅಪ್ಪಾ ಅವರ ಕೊಡುಗೆ ಅನನ್ಯ: ದಾಕ್ಷಾಯಿಣಿ ಅಪ್ಪಾ

| Published : Jan 05 2024, 01:45 AM IST

ನಾಡಿಗೆ ಡಾ.ಅಪ್ಪಾ ಅವರ ಕೊಡುಗೆ ಅನನ್ಯ: ದಾಕ್ಷಾಯಿಣಿ ಅಪ್ಪಾ
Share this Article
  • FB
  • TW
  • Linkdin
  • Email

ಸಾರಾಂಶ

ಸುಭಾಶ್‌ಚಂದ್ರ ಪಾಟೀಲ್ ಜನಕಲ್ಯಾಣ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ೨೦೨೩ನೇ ಸಾಲಿನ ೭ನೇ ವರ್ಷದ ರಾಜ್ಯ ಮಟ್ಟದ ಚಿನ್ನದ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಾಡಿಗೆ ಡಾ. ಶರಣಬಸವಪ್ಪ ಅಪ್ಪಾ ಅವರ ಕೊಡುಗೆ ಅನನ್ಯ ಎಂದು ಶರಣಬಸವೇಶ್ವರ ಸಂಸ್ಥಾನದ ಮುಖ್ಯಸ್ಥೆ, ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಹೇಳಿದ್ದಾರೆ.

ಸುಭಾಶ್‌ಚಂದ್ರ ಪಾಟೀಲ್ ಜನಕಲ್ಯಾಣ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ೨೦೨೩ನೇ ಸಾಲಿನ ೭ನೇ ವರ್ಷದ ರಾಜ್ಯ ಮಟ್ಟದ ಚಿನ್ನದ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗೌಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜಗದ್ಗುರು ಡಾ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕಲ್ಯಾಣ ಕರ್ನಾಟಕದ ಕಲಬುರಗಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ವಿಶ್ವಾತ್ಮಕ ನೆಲೆಗಟ್ಟಿನಲ್ಲಿ ಶರಣಬಸವೇಶ್ವರ ಸಂಸ್ಥಾನ ಬೆಳೆಸಿದ ಕೀರ್ತಿ ಡಾ.ಶರಣಬಸಪ್ಪ ಅವರಿಗೆ ಸಲ್ಲುತ್ತದೆ ಎಂದರು. ಉದ್ಯಮಿ ನೀಲಕಂಠರಾವ ಮೂಲಗೆ, ಬಸವರಾಜ ದೇಶಮುಖ, ಡಾ.ನೀದೀಶ ನಿಷ್ಠಿ, ಡಾ ಅಲ್ಲಂಪ್ರಭು ದೇಶಮುಖ ಮಾತನಾಡಿದರು.

ಕಸಾಪ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಠಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಮಾತನಾಡಿದರು. ಸಾಹಿತ್ಯ ಸೇವೆಗಾಗಿ ಹಿರಿಯ ಸಾಹಿತಿ ಧರ್ಮಣ್ಣ ಧನ್ನಿ ಹಾಗೂ ಸಾಮಾಜಿಕ ಸೇವೆಗಾಗಿ ಸುವರ್ಣ ಛಪ್ಪರಬಂದಿ ಅವರಿಗೆ ಬೆಳ್ಳಿ ಪದಕದೊಂದಿಗೆ ಗೌಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಡಾ ಆನಂದ ಸಿದ್ದಮಣಿ ನಿರೂಪಿಸಿದರು. ಡಾ. ಕೆ.ಗಿರಿಮಲ್ಲ ವಂದಿಸಿದರು. ಶರಣಗೌಡ ಪಾಟೀಲ್ ಪಾಳಾ, ಶಿವರಾಜ ಅಂಡಗಿ, ಬಿ.ಎಚ್. ನಿರಗೂಡಿ, ಸುರೇಶ್ ನಂದಗಾಂವ, ಶಿವರಾಜ ಶಾಸ್ತ್ರಿ ಹೇರೂರ, ಕಲ್ಯಾಣಕುಮಾರ ಶೀಲವಂತ, ಸಾಹಿತಿ ಕಲ್ಯಾಣರಾವ ಪಾಟೀಲ್ ಶರಣರಾಜ ಛಪ್ಪರಬಂದಿ, ಡಾ ಶರಣಬಸಪ್ಪ ವಡ್ಡನಕೇರಿ, ಅಂಬಾರಾಯ ಕೋಣೆ, ಮಾಲಾ ಕಣ್ಣಿ, ಜಗದೀಶ್ ಮರಪಳ್ಳಿ, ರಾಜೇಂದ್ರ ಝಳಕಿ ಬಸವಂತರಾಯ ಕೋಳಕೂರ್, ಶಿವಯೋಗಿ ಭಜಂತ್ರಿ, ಗುಂಡಪ್ಪ ನಾಟಿಕರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.